Select Your Language

Notifications

webdunia
webdunia
webdunia
webdunia

ರೇಪ್ ಕೇಸ್ ಹಿಂಪಡೆಯದಿದ್ರೆ ಮತ್ತೆ ರೇಪ್ ಮಾಡ್ತೇನೆ ಎಂದು ಯುವತಿಗೆ ಬೆದರಿಸಿದ ಆರೋಪಿ

ರೇಪ್ ಕೇಸ್ ಹಿಂಪಡೆಯದಿದ್ರೆ ಮತ್ತೆ ರೇಪ್ ಮಾಡ್ತೇನೆ ಎಂದು ಯುವತಿಗೆ ಬೆದರಿಸಿದ ಆರೋಪಿ
ಮುಜಾಫರ್‌ನಗರ್ (ಉತ್ತರಪ್ರದೇಶ) , ಗುರುವಾರ, 27 ಆಗಸ್ಟ್ 2015 (20:42 IST)
ಅತ್ಯಾಚಾರವೆಸಗಿದ ದೂರು ಹಿಂಪಡೆಯದಿದ್ದಲ್ಲಿ ಮತ್ತೆ ಅತ್ಯಾಚಾರವೆಸಗುವುದಾಗಿ ಆರೋಪಿ ಯುವತಿಗೆ ಬೆದರಿಸಿದ ಘಟನೆ ವರದಿಯಾಗಿದೆ.
 
ಕಳೆದ ಆಗಸ್ಟ್ 21 ರಂದು ಫುಗುಣಾ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಕುರ್ವಾವಾ ಗ್ರಾಮದ ಅಂಕುರ್ ಎನ್ನುವ ವ್ಯಕ್ತಿ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದನು. ಆರೋಪಿಯ ವಿರುದ್ಧ ಯುವತಿಯ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 
 
ಅತ್ಯಾಚಾರ ಪ್ರಕರಣ ದಾಖಲಾದ ಕೂಡಲೇ ಪರಾರಿಯಾಗಿದ್ದ ಆರೋಪಿ ಯುವತಿಗೆ ಕರೆ ಮಾಡಿ ಪ್ರಕರಣವನ್ನು ಹಿಂಪಡೆಯದಿದ್ದಲ್ಲಿ ಮತ್ತೊಮ್ಮೆ ಅತ್ಯಾಚಾರವೆಸಗುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
 
ಆರೋಪಿಯ ಬೆದರಿಕೆಯಿಂದ ಆಕ್ರೋಶಗೊಂಡ ಯುವತಿ ಪೊಲೀಸ್ ಠಾಣೆಗೆ ತೆರಳಿ ಕೇಸ್ ಹಿಂಪಡೆಯದಿದ್ದಲ್ಲಿ ಮತ್ತೆ ರೇಪ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಮತ್ತೊಂದು ದೂರು ದಾಖಲಿಸಿದ್ದಾಳೆ.

Share this Story:

Follow Webdunia kannada