ದೇಶದಲ್ಲಿನ ಕಪ್ಪು ಹಣದ ವಹಿವಾಟು ತಡೆಯಲು ಕೇಂದ್ರ ಸರಕಾರ ಕೂಡಲೇ 1000 ರೂ ಮತ್ತು 500 ರೂಗಳ ಚಲಾವಣೆಯನ್ನು ರದ್ದುಗೊಳಿಸಬೇಕು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಒತ್ತಾಯಿಸಿದ್ದಾರೆ.
ಭ್ರಷ್ಟಾಚಾರಿಗಳಿಗೆ ಮತ್ತು ಕಪ್ಪು ಹಣ ಹೊಂದಿದವರಿಗೆ ರಾಜಕಾರಣ ಆಶ್ರಯ ನೀಡುತ್ತಿದೆ. ರಾಜಕೀಯದಲ್ಲಿರುವ ಕೆಲವರು ಜನತೆಯ ತೀರ್ಪನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕೇಂದ್ರ ಸರಕಾರ ಕೂಡಲೇ 1000 ರೂ ಮತ್ತು 500 ರೂಗಳ ಚಲಾವಣೆಯನ್ನು ರದ್ದುಗೊಳಿಸುವಂತೆ ಪ್ರಧಾನಿ ಮೋದಿಯವರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಒಂದು ವೇಳೆ, ಸಾವಿರ ರೂ. ಮತ್ತು ಐದು ನೂರು ರೂಪಾಯಿಗಳ ಚಲಾವಣೆ ರದ್ದುಗೊಳಿಸಿದಲ್ಲಿ, ಮತದಾರರನ್ನು ಖರೀದಿಸು ತಂತ್ರ ಅಂತ್ಯವಾಗಲಿದೆ. ಇದರಿಂದ ಕಪ್ಪು ಹಣ ಚಲಾವಣೆ ಅಂತ್ಯಗೊಳಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸ್ಮಾರ್ಟ್‌ಫೋನ್ ಮೂಲಕ ಶಾಪಿಂಗ್, ಟ್ರಾವೆಲಿಂಗ್, ಹಣ ವರ್ಗಾವಣೆ ಅಥವಾ ವಿದೇಶದಲ್ಲಿ ವೆಚ್ಚ ಮಾಡುವ ಸಂದರ್ಭಗಳಿಗೂ ಸ್ಮಾರ್ಟ್‌ಫೋನ್ ಸಾಕು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ