ಈ ಹಿಂದೆ ಉಗ್ರರ ದಾಳಿಗೆ ನಲುಗಿದ್ದ ಪಂಜಾಬ್ನ ಪಠಾಣ್ಕೋಟ್ನಲ್ಲಿ ವಾರಸುದಾರರಿಲ್ಲದ ಕಾರ್ ಪತ್ತೆಯಾಗಿದ್ದು, ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ವರದಿಗಳ ಪ್ರಕಾರ ಬಮಿಯಾಲ್ ಪ್ರದೇಶದಲ್ಲಿ ಬುಧವಾರ ರಾತ್ರಿ ಆ ಕಾರ್ನಲ್ಲಿ ಮೂವರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಸ್ಥಳೀಯರು ಅವರನ್ನು ಹಿಂಬಾಲಿಸಿದಾಗ ಕಾರ್ನ್ನು ಲಾಕ್ ಮಾಡಿ ಹತ್ತಿರದ ಹಳ್ಳಿಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಕಾರ್ಗೆ ಜಮ್ಮು ಮತ್ತು ಕಾಶ್ಮೀರದ ನೋಂದಣಿ ಸಂಖ್ಯೆ ಇದೆ. ಅದರಲ್ಲಿದ್ದ ಶಂಕಿತರ ಶೋಧ ಕಾರ್ಯವನ್ನು ಆರಂಭಿಸಲಾಗಿದೆ ಎಂದು ಪಠಾಣ್ಕೋಟ್ನ ಹಿರಿಯ ಪೊಲೀಸ್ ಅಧೀಕ್ಷಕರಾದ ರಾಕೇಶ್ ಕೌಶಲ್ ತಿಳಿಸಿದ್ದಾರೆ.
ಕಾರ್ನ್ನು ಅನ್ಲಾಕ್ ಮಾಡಿದ ಬಳಿಕ ಅದರಲ್ಲಿ ಬಂದವರ ಬಗ್ಗೆ ಹೆಚ್ಚಿನ ಮಾಹಿತಿಗಳು ಸಿಗಬಹುದು ಎಂದು ಕೌಶಲ್ ಹೇಳಿದ್ದಾರೆ.
ಇದೇ ವರ್ಷ ಜನೇವರಿ 2 ರಂದು ಭಾರಿ ಶಸ್ತ್ರಸಜ್ಜಿತ ಉಗ್ರರ ಗುಂಪು ಪಠಾಣ್ಕೋಟ್ ವಾಯುನೆಲೆಯ ಮೇಲೆ ದಾಳಿ ಮಾಡಿತ್ತು.