Select Your Language

Notifications

webdunia
webdunia
webdunia
webdunia

ಗೋವಾದಲ್ಲಿ 40 ಸ್ಥಾನಗಳ ಪೈಕಿ 35ರಲ್ಲಿ ಆಪ್‌ಗೆ ಜಯ: ಕೇಜ್ರಿವಾಲ್

ಗೋವಾದಲ್ಲಿ 40 ಸ್ಥಾನಗಳ ಪೈಕಿ 35ರಲ್ಲಿ ಆಪ್‌ಗೆ ಜಯ: ಕೇಜ್ರಿವಾಲ್
ಪಣಜಿ , ಬುಧವಾರ, 29 ಜೂನ್ 2016 (16:52 IST)
ಗೋವಾದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಆಪ್ 45 ಸ್ಥಾನಗಳ ಪೈಕಿ 35ರಲ್ಲಿ ಆಪ್ ಜಯಗಳಿಸಲಿದೆ ಎಂದು ಪಕ್ಷದ ಸಂಚಾಲಕ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. 

ವಾಸ್ಕೋದಲ್ಲಿ ಮೀನುಗಾರರ ಸಮುದಾಯವನ್ನು ಉದ್ದೇಶಿಸಿ ಮಾತನ್ನಾಡುತ್ತಿದ್ದ ಕೇಜ್ರಿವಾಲ್, ಗೋವಾದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಭವಿಷ್ಯವನ್ನು ಆಪ್ ಹಾಳುಗೆಡವಲಿದೆ. 40 ಸೀಟುಗಳಲ್ಲಿ 35ರಲ್ಲಿ ನಮ್ಮ ಗೆಲುವು ನಿಶ್ಚಿತ ಎಂದು ಹೇಳಿದ್ದಾರೆ. 
 
ರಾಜ್ಯದಲ್ಲಿ ಆಪ್ ಕಡೆಯಿಂದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಕೇಳಲಾಗಿ ರಾಜ್ಯದ ವ್ಯಕ್ತಿಗೆ ಆ ಜವಾಬ್ದಾರಿಯನ್ನು ನೀಡುತ್ತೇವೆ ಎಂದು ಅವರು ಉತ್ತರಿಸಿದ್ದಾರೆ. 
 
ರಾಜ್ಯದಲ್ಲಿ 20 ಲಕ್ಷ ಜನರು ವಾಸಿಸುತ್ತಿದ್ದಾರೆ. ಗೋವೆಯನ್ನರಿಗೆ ನಾಯಕತ್ವದ ಸಾಮರ್ಥ್ಯವಿದೆ. ನಾನಿಲ್ಲಿ ತುಂಬ ಕಿರಿಯ ವ್ಯಕ್ತಿ. ದೆಹಲಿಯಲ್ಲಿ ಕುಳಿತುಕೊಂಡು ಹೆಚ್ಚಿನದೇನೂ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. 
 
ನಿಮ್ಮ ವರ್ಚಸ್ಸು ಆಪ್‌ಗಿಂತ ದೊಡ್ಡದಾಗಿ ಬೆಳೆಯುತ್ತಿದೆಯೇ? ಎಂದು ಕೇಳಲಾಗಿ ಕೇಜ್ರಿವಾಲ್ ಪ್ರಮುಖವಲ್ಲ, ಪಕ್ಷ ಮಹತ್ವವಾದದ್ದು ಎಂದ ಅವರು ದೆಹಲಿಯಲ್ಲಾದ ಐತಿಹಾಸಿಕ ಗೆಲುವು ಗೋವಾದಲ್ಲೂ ಪುನರಾವರ್ತನೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಫೇಸ್‌ಬುಕ್ ನಿಮ್ಮ ಗೆಳೆಯರನ್ನು ಆಯ್ಕೆ ಮಾಡುವಂತೆ ಸಲಹೆ ಕೊಡಲು ಕಾರಣವೇನು ಗೊತ್ತೆ?