Select Your Language

Notifications

webdunia
webdunia
webdunia
webdunia

ದೆಹಲಿ: ವೇತನ, ತುಟ್ಟಿಭತ್ಯೆ ಹೆಚ್ಚಳಗೊಳಿಸುವಂತೆ ಆಪ್ ಶಾಸಕರ ಒತ್ತಾಯ

ದೆಹಲಿ: ವೇತನ, ತುಟ್ಟಿಭತ್ಯೆ ಹೆಚ್ಚಳಗೊಳಿಸುವಂತೆ ಆಪ್ ಶಾಸಕರ ಒತ್ತಾಯ
ನವದೆಹಲಿ , ಶನಿವಾರ, 4 ಜುಲೈ 2015 (14:56 IST)
ಜಾಹಿರಾತಿಗಾಗಿ 500 ಕೋಟಿ ರೂಪಾಯಿ ವೆಚ್ಚ ಮಾಡಿದ ಆರೋಪ ಎದುರಿಸುತ್ತಿರುವ ಆಮ್ ಆದ್ಮಿ ಪಕ್ಷದ ಸರಕಾರ, ಇದೀಗ ಆಮ್ ಆದ್ಮಿ ಶಾಸಕರು ವೇತನವನ್ನುನ ಹೆಚ್ಚಳಗೊಳಿಸುವಂತೆ ಒತ್ತಾಯಿಸಿರುವುದು ವಿಪಕ್ಷಗಳ ಕೆಂಗೆಣ್ಣಿಗೆ ಗುರಿಯಾಗಿದೆ.
 
ಆಪ್ ಶಾಸಕರಾದ ಪ್ರವೀಣ್ ದೇಶಮುಖ್, ಸೌರಭ್ ಭಾರಧ್ವಾಜ್ ಸರಿತಾ ಸಿಂಗ್, ಸಂಜೀವ್ ಝಾ ಮತ್ತು ಸೋಮದುತ್ತ ವೇತನ ಹೆಚ್ಚಿಸಿವಂತೆ ಸರಕಾರಕ್ಕೆ ಮನವಿ ಮಾಡಿದ್ದಾರೆ. 
 
ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷದ ಶಾಸಕರು ವೇತನ ಮತ್ತು ತುಟ್ಟಿಭತ್ಯೆ ಏರಿಕೆಯನ್ನು ಬಿಜೆಪಿ ಪಕ್ಷದ ಮೂವರು ಶಾಸಕರು ವಿರೋಧಿಸಿದ್ದಾರೆ.
 
ಆಮ್ ಆದ್ಮಿ ಪಕ್ಷದ ಶಾಸಕ ಸೌರಭ್ ಭಾರಧ್ವಾಜ್ ಮಾತನಾಡಿ, ಪ್ರಸ್ತಪತ ಶಾಸಕರಿಗೆ ನೀಡುತ್ತಿರುವ ವೇತನದಲ್ಲಿ ಕುಟುಂಬವನ್ನು ಸರಿದೂಗಿಸಿಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೆಲ ಶಾಸಕರು ವೇತನ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ. ವೇತನ ಹೆಚ್ಚಳ ಕುರಿತಂತೆ ಸದನದಲ್ಲಿ ಅರ್ಥಪೂರ್ಣ ಚರ್ಚೆಯಾಗಬೇಕು ಎಂದು ಹೇಳಿದ್ದಾರೆ.
 
 ನಮ್ಮ ಮನೆಗೆ ತಮ್ಮ ಅಹವಾಲುಗಳನ್ನು ಹೊತ್ತುಕೊಂಡು ಪ್ರತಿನಿತ್ಯ ಮನೆಗೆ ಜನತೆ ಬರುತ್ತಾರೆ. ಅವರಿಗೆ ಕನಿಷ್ಠ ಒಂದು ಕಪ್ ಚಹಾ ನೀಡಬೇಕಾಗುತ್ತದೆ. ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಬಾರಿ ಪ್ರಯಾಣಿಸಬೇಕಾಗುತ್ತದೆ. ಆದ್ದರಿಂದ, ಸರಕಾರ ನೀಡುತ್ತಿರುವ ವೇತನ ನಮಗೆ ಸಾಕಾಗುತ್ತಿಲ್ಲ ಎಂದು ಆಮ್ ಆದ್ಮಿ ಶಾಸಕರ ತಿಳಿಸಿದ್ದಾರೆ. 

Share this Story:

Follow Webdunia kannada