Select Your Language

Notifications

webdunia
webdunia
webdunia
webdunia

ಫೇಸ್‌‌‌ಬುಕ್‌‌‌ನಲ್ಲಿ ಭಾರತದ ಧ್ವಜದ ಬದಲು ಇಟಲಿ ಧ್ವಜ ಅಳವಡಿಸಿದ ಆಫ್‌‌

ಫೇಸ್‌‌‌ಬುಕ್‌‌‌ನಲ್ಲಿ ಭಾರತದ ಧ್ವಜದ ಬದಲು ಇಟಲಿ ಧ್ವಜ ಅಳವಡಿಸಿದ ಆಫ್‌‌
ನವದೆಹಲಿ , ಮಂಗಳವಾರ, 12 ಆಗಸ್ಟ್ 2014 (19:37 IST)
ಆಮ್‌‌ ಅದ್ಮಿ ಪಾರ್ಟಿಯ ಫೇಸ್‌ಬುಕ್‌ ಫೇಜ್‌‌ನಲ್ಲಿ ಹಾಕಿರುವ ಭಾರತದ ಧ್ವಜದ ಚಿತ್ರದ ಕುರಿತು ವಿವಾದ ಉಂಟಾಗಿದೆ.ಆಪ್‌  ಪಕ್ಷ ಭಾರತದ ರಾಷ್ಟ್ರ ಧ್ವಜ ಹಾಕುವ ಬದಲು ಬೇರೆ ರಾಷ್ಟ್ರ ಧ್ವಜದ ಫೋಟೋ ಹಾಕಿದ್ದಾರೆ ಎಂದು ಕಮೆಂಟ್‌ದಾರರು ಲೇವಡಿ ಮಾಡಿದ್ದಾರೆ.
 
ಈ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚು ಚರ್ಚೆಗಳು ನಡೆದು ಟೀಕೆಗಳು ವ್ಯಕ್ತವಾದಾಗ ಪಕ್ಷ ಶನಿವಾರ ತನ್ನ ಫೇಸ್‌ಬುಕ್‌‌‌ ಪೇಜ್‌‌‌ನ ಕವರ್‌‌‌ ಪೋಟೊ ಬದಲಾಯಿಸಿದೆ. ಪಕ್ಷದ ಆಫಿಶಿಯಲ್‌‌‌ ಫೇಸ್‌‌‌ಬುಕ್‌‌‌‌ ಕವರ್‌ ಫೋಟೋ ರೂಪದಲ್ಲಿ ಹಾಕಲಾಗಿತ್ತು. ಚಿತ್ರದಲ್ಲಿ ಮೂರು ಬಣ್ಣಗಳ ಧ್ವಜದ ನಡುವೆ ಒಂದು ಬಿಂದು ಕಾಣಿಸುತ್ತಿತ್ತು. ಈ ಬಿಂದುವಿನ ಒಳಗಡೆ ಕೂಡ ಮೂರು ಬಣ್ಣಗಳ ಧ್ವಜವಿತ್ತು ಮತ್ತು ಇಮೇಜ್‌‌‌‌ ಮೇಲೆ " ಪೆಟ್ರಿಯಾಟಿಜಮ್‌‌ ಇನ್‌ ಎವರಿ ಡ್ರಾಪ್ ಎಂದು ಬರೆಯಲಾಗಿತ್ತು. 
 
ಈ ಧ್ವಜದಲ್ಲಿ ಕಂಡು ಬರುತ್ತಿರುವ ಬಣ್ಣಗಳು ಭಾರತೀಯ ತ್ರಿವರ್ಣ ಧ್ವಜಕ್ಕೆ ಹೋಲುತ್ತಿಲ್ಲ ಎಂದು ಕೆಲ ಜನರು ಕಮೆಂಟ್ ಮಾಡಿದ್ದಾರೆ. ಇಮೇಜ್‌‌ನಲ್ಲಿ ಕೇಸರಿ ಬಣ್ಣದ ಬದಲಿಗೆ ಕೆಂಪು ಬಣ್ಣದ ಪ್ರಯೋಗ ಮಾಡಲಾಗಿದೆ ಮತ್ತು ಇದು ಇಂಡಿಯಾದ ಧ್ವಜವಲ್ಲ ಹೊರತು ಇದು ಇಟಲಿಯದ್ದಾಗಿದೆ ಇನ್ನೂ ಕೆಲವರು ಕಮೆಂಟ್‌ ಮಾಡಿದ್ದಾರೆ. ಭಾರತೀಯ ಧ್ವಜಕ್ಕೆ ಅಪಮಾನ ಮಾಡಿದ ಕಾರಣ ಕೇಜ್ರಿವಾಲ್‌ ಮತ್ತು ಆಮ್‌ ಆದ್ಮಿ ಪಕ್ಷದ ವಿರುದ್ದ ದೂರು ದಾಖಲಿಸಬೇಕು ಎಂದು ಕೆಲವರು ಕಮೆಂಟ್‌ ಮಾಡಿದ್ದಾರೆ. 
 
ಈ ನಡುವೆ ಬಿಜೆಪಿ ನಾಯಕ ಸುಬ್ರಹ್ಮಣ್ಯನ್‌ ಸ್ವಾಮಿ ಕೂಡ ಫೇಸ್‌‌‌ಬುಕ್‌‌‌ ಪೋಸ್ಟ್‌‌ ಕುರಿತು ಆಪ್‌‌‌‌ಗೆ ಟೀಕೆಗಳನ್ನು ಸುರಿಸಿದ್ದಾರೆ. " ಕೇಜ್ರಿವಾಲ್‌ ಎಂಟಾನಿಯೊ ಮೇಡಮ್‌‌ ಪರವಾಗಿ ತಮ್ಮ ನಿಷ್ಠೆ ತೋರಿಸುತ್ತಿದ್ದಾರೆಯೇ?. ಆಪ್‌‌‌ನ ಆಫೀಶಿಯಲ್‌‌‌ ಪೇಜ್‌‌ ಮೇಲೆ ಇಂಡಿಯಾದ ಧ್ವಜದ ಬದಲಿಗೆ ಇಟಲಿಯ ಧ್ವಜ ತೋರಿಸಲಾಗುತ್ತಿದೆ, ಪಕ್ಷ ಜನಸಾಮಾನ್ಯರಿಗೆ ಮುರ್ಖರನ್ನಾಗಿಸಲು ಯೋಚಿಸುತ್ತಿದೆಯೇ? ಎಂದು ಸ್ವಾಮಿ ಪೋಸ್ಟ್‌ ಮಾಡುವುದರ ಜೊತೆಗೆ ಫೇಸ್‌‌ಬುಕ್‌‌‌‌ನಲ್ಲಿ ಹಾಕಿರುವ ಇಮೇಜ್‌‌ ಮತ್ತು ಇಟಲಿಯ ಧ್ವಜದ ಚಿತ್ರ ಕೂಡ ಪೋಸ್ಟ್‌ ಮಾಡಿದ್ದಾರೆ.

Share this Story:

Follow Webdunia kannada