Webdunia - Bharat's app for daily news and videos

Install App

ಆಪ್ ಶಾಸಕ ಅಂದರ್

Webdunia
ಗುರುವಾರ, 22 ಸೆಪ್ಟಂಬರ್ 2016 (08:45 IST)
ತನ್ನ ಸಂಬಂಧಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನೆದುರಿಸುತ್ತಿದ್ದ ಆಪ್ ಶಾಸಕ ಅಮಾನತುಲ್ಲಾ ಖಾನ್‌ನನ್ನು ದೆಹಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ವಿಚಾರಣೆಗೆಂದು ಆಗಮಿಸಿದ್ದ ಖಾನ್ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಖಾನ್ ಸೋಮವಾರ ಜಾಮಿಯಾ ನಗರ ಪೊಲೀಸ್ ಠಾಣೆಗೆ ತೆರಳಿ ತನ್ನನ್ನು ಬಂಧಿಸುವಂತೆ ಹೇಳಿದ್ದರು. ಆದರೆ ಪೊಲೀಸರು ಅದಕ್ಕೆ ಅಸಮ್ಮತಿ ಸೂಚಿಸಿ ನಾವು ತನಿಖಾ ವರದಿಯನ್ನು ಅನುಸರಿಸಿ ಕ್ರಮ ಕೈಗೊಳ್ಳುತ್ತೇವೆ, ಎಂದು ಹೇಳಿದ್ದರು.
 
ಭಾನುವಾರ ಒತ್ತಡದ ಹಿನ್ನೆಲೆಯಲ್ಲಿ ಪೊಲೀಸರು ನನ್ನನ್ನು ಬಂಧಿಸ ಬಯಸಿದ್ದಾರೆ ಎಂದಿದ್ದ ಓಖ್ಲಾ ಶಾಸಕ ಸೋಮವಾರ ಜನರ ಒತ್ತಡದಿಂದಾಗಿ ಪೊಲೀಸರು ನನ್ನನ್ನು ಬಂಧಿಸುತ್ತಿಲ್ಲ ಎಂದಿದ್ದರು. 
 
ಖಾನ್ ಅತ್ತಿಗೆ ಎಂದು ಹೇಳುತ್ತಿರುವ ಮಹಿಳೆ ಕೆಲ ದಿನಗಳ ಹಿಂದೆ, ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ್ದಾಳೆ.
 
ಈ ಹಿಂದೆ ಕೂಡ ಬೇರೆ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಆಪ್ ಶಾಸಕ ಬಳಿಕ ಜಾಮೀನು ಪಡೆದು ಹೊರ ಬಂದಿದ್ದರು. 
 
ಅಧಿಕಾರಕ್ಕೇರಿದಾಗಿನಿಂದ ಆಪ್ ಶಾಸಕರು ಬಂಧನಕ್ಕೊಳಗಾದ 19ನೇ ಪ್ರಕರಣ ಇದಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Mallikarjun Kharge: ಮಾರಾಯಾ ನಿನ್ನ ಇಂಗ್ಲಿಷ್ ತಗೊಂಡು ನಾವೇನು ಮಾಡೋಣ ಮೋದಿ, ದೇಶಕ್ಕೆ ಭದ್ರತೆ ಕೊಡಿ: ಮಲ್ಲಿಕಾರ್ಜುನ ಖರ್ಗೆ

Karnataka Weather: ರಾಜ್ಯದಲ್ಲಿ ಇನ್ನು ನಾಲ್ಕು ದಿನಗಳಿಗೆ ಮಳೆ

Mangaluru Suhas Shetty: ಮಂಗಳೂರು ಸುಹಾಸ್ ಶೆಟ್ಟಿ ನಡುರಸ್ತೆಯಲ್ಲೇ ಹತ್ಯೆ ಮಾಡುವ ಭೀಕರ ವಿಡಿಯೋ ಇಲ್ಲಿದೆ ನೋಡಿ

Mangaluru Suhas Shetty murder: ಇಂದು ದಕ್ಷಿಣ ಕನ್ನಡ ಬಂದ್

Mangalore Suhas Shetty: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಬರ್ಬರ ಹತ್ಯೆ: ಮತ್ತೆ ಕೋಮುಗಲಭೆಯ ಆತಂಕ

ಮುಂದಿನ ಸುದ್ದಿ