Webdunia - Bharat's app for daily news and videos

Install App

ಗುಜರಾತ್‌ನಲ್ಲಿ ಕಣಕ್ಕಿಳಿಯಲಿದ್ದೇವೆ: ಅರವಿಂದ ಕೇಜ್ರಿವಾಲ್

Webdunia
ಸೋಮವಾರ, 17 ಅಕ್ಟೋಬರ್ 2016 (14:58 IST)
ಗೋವಾ, ಪಂಜಾಬ್‌ಗಳಂತೆ ನಾವು ಗುಜರಾತ್‌ನಲ್ಲಿ ಸಹ ಅದೃಷ್ಟ ಪರೀಕ್ಷಿಸಲಿದ್ದೇವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. 
ಸೂರತ್‌ನಲ್ಲಿ ಭಾರಿ ಪ್ರಚಾರ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕೇಜ್ರಿವಾಲ್ ತಾವು ಗುಜರಾತ್ ವಿಧಾನಸಭೆಯಲ್ಲಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. 
 
ಈ ಸಂದರ್ಭದಲ್ಲಿ ಅಮಿತ್ ಶಾ ಮತ್ತು ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ಕಮಲ ನೇತೃತ್ವದ ಸರ್ಕಾರದ ಮೇಲೆ ಈಗಾಗಲೇ ಮುನಿಸಿಕೊಂಡಿರುವ ಪಟೇದಾರ್ ಸಮುದಾಯವನ್ನು ತಮ್ಮತ್ತ ಒಲಿಸಿಕೊಳ್ಳುವ ಪ್ರಯತ್ನವನ್ನು ಮಾಡಿದರು. 
 
ವಾಸ್ತವವಾಗಿ ಅಮಿತ್ ಶಾ ಅವರೇ ಗುಜರಾತ್ ಆಡಲಿತ ನಡೆಸುತ್ತಿದ್ದಾರೆ, ಅವರನ್ನು ಕಿತ್ತೊಗೆಯಿರಿ ಎಂದು ಅವರ ಮತದಾರರರಲ್ಲಿ ಮನವಿ ಮಾಡಿದ್ದಾರೆ. 
 
ಅಮಿತ್ ಶಾ ಅವರನ್ನು ರಾಷ್ಟ್ರದ್ರೋಹಿ ಎಂದ ಅವರು ಪಟೇದಾರ್ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್ ಪಟೇಲ್ ಅವರನ್ನು ದೇಶಭಕ್ತ ಎಂದು ಎಂದು ಹೊಗಳಿದರು. 
 
ಕಮಲ ಮತ್ತು ಕೈ ಗಂಡ- ಹೆಂಡತಿಯರಿದ್ದರಂತೆ ಎಂದ ಕೇಜ್ರಿವಾಲ್, ಚುನಾವಣೆಯ ಬಳಿಕ ವಿಧಾನಸಭೆಯಲ್ಲಿ ಕುಳಿತುಕೊಳ್ಳುವವರು  ಆಪ್ ಸದಸ್ಯರು, ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರಲ್ಲ ಎಂದು ಅವರು ಭವಿಷ್ಯ ನುಡಿದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments