Webdunia - Bharat's app for daily news and videos

Install App

ಆಮ್ ಆದ್ಮಿ ಪಕ್ಷವು ದೆಹಲಿಗೆ ಅನಾಹುತವಿದ್ದಂತೆ, ಅದನ್ನು ಕಿತ್ತೊಗೆಯಿರಿ: ಪ್ರಧಾನಿ ನರೇಂದ್ರ ಮೋದಿ ಕರೆ

Sampriya
ಶುಕ್ರವಾರ, 3 ಜನವರಿ 2025 (15:18 IST)
Photo Courtesy X
ನವದೆಹಲಿ: ಆಮ್ ಆದ್ಮಿ ಪಕ್ಷವು ದೆಹಲಿಗೆ ಅನಾಹುತವಿದ್ದಂತೆ. ದೆಹಲಿಯಲ್ಲಿ ಈ ಅನಾಹುತದ ವಿರುದ್ಧ ಕದನ ಆರಂಭವಾಗಿದೆ. ಈ ಪಕ್ಷವನ್ನು ಕಿತ್ತೊಗೆಯುವುದೊಂದೇ ನಮ್ಮ ಧ್ಯೇಯ. ಈ ಅನಾಹುತವನ್ನು ಕಿತ್ತೊಗೆದು, ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದ ದೆಹಲಿಯನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿರುವ ಈ ಪಕ್ಷವನ್ನು ಚುನಾವಣೆಯಲ್ಲಿ ಸೋಲಿಸಿ. ಎಎಪಿ ಆಡಳಿತವು ಇನ್ನೂ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂದಿದ್ದಾರೆ.

ಒಂದೆಡೆ ಎಲ್ಲವನ್ನೂ ಉತ್ತಮಗೊಳಿಸಲು ಕೇಂದ್ರ ತನ್ನೆಲ್ಲಾ ಪ್ರಯತ್ನ ಮಾಡುತ್ತಿದೆ. ಮತ್ತೊಂದೆಡೆ ಕೇಂದ್ರಾಡಳಿತ ಪ್ರದೇಶವು, ಲಜ್ಜೆಗೆಟ್ಟು ಸುಳ್ಳುಗಳನ್ನು ಹರಡುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಎಎಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಶಾಲಾ ಶಿಕ್ಷಣ, ಮಾಲಿನ್ಯ ಹಾಗೂ ಮದ್ಯ ಮಾರಾಟ ಕುರಿತು ಸಾಕಷ್ಟು ಅವ್ಯವಹಾರ ನಡೆಸಿದೆ ಎಂದು ಆರೋಪಿಸಿದ್ದಾರೆ.

ದೆಹಲಿ ಅಭಿವೃದ್ಧಿ ಪ್ರಾಧಿಕಾರದಿಂದ ಬಡವರಿಗೆ ನಿರ್ಮಾಣಗೊಂಡ ಮನೆಗಳು ಹಾಗೂ ಹೆದ್ದಾರಿಗಳ ನಿರ್ಮಾಣದಲ್ಲಿ ಅನಾಹುತ ಸರ್ಕಾರದ ಹಸ್ತಕ್ಷೇಪಕ್ಕೆ ಯಾವುದೇ ಅವಕಾಶವಿಲ್ಲ. ಹೀಗಾಗಿ ಇವು ಕಾರ್ಯರೂಪಕ್ಕೆ ಬಂದಿವೆ. ದೇಶದ ಜನರಿಗೆ ಮನೆ ಕಟ್ಟಿಕೊಡುವುದು ತನ್ನ ಕನಸು ಎಂದಿದ್ದ ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್‌ ಅವರು ತಮಗಾಗಿ ಶೀಶ ಮಹಲ್‌ ನಿರ್ಮಿಸಿಕೊಳ್ಳಬಹುದಿತ್ತು. ಈ ಪಕ್ಷದ ಜನರು ಭ್ರಷ್ಟಾಚಾರ ನಡೆಸುತ್ತಾರೆ. ನಂತರ ಅದನ್ನು ವೈಭವೀಕರಿಸುತ್ತಾರೆ ಎಂದು ಎಎಪಿ ವಿರುದ್ಧ ವಾಗ್ದಾಳಿ ನಡೆಸಿದರು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Rahul Gandhi: ಆಪರೇಷನ್ ಸಿಂದೂರ ಬಳಿಕ ರಾಹುಲ್ ಗಾಂಧಿ, ಖರ್ಗೆ ಇಷ್ಟು ಗಂಭೀರ ಯಾಕೆ: ನೆಟ್ಟಿಗರ ಪ್ರಶ್ನೆ

Operation Sindoor: ಸರ್ವಪಕ್ಷ ಸಭೆಗೆ ಮತ್ತೆ ಪ್ರಧಾನಿ ಮೋದಿ ಗೈರು: ವಿಪಕ್ಷಗಳ ಕೆಂಗಣ್ಣು

Arecanut price today: ಅಡಿಕೆ ಬೆಳೆಗಾರರಿಗೆ ಇಂದು ನಿರಾಸೆ, ಇಂದಿನ ದರ ಎಷ್ಟಾಗಿದೆ ನೋಡಿ

Shocking video: ದುಪ್ಪಟ್ಟು ದರ ವಸೂಲಿ ಮಾಡುತ್ತಿರುವುದೇಕೆ ಪ್ರಶ್ನಿಸಿದ್ದಕ್ಕೆ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ರೈಲು ಸಿಬ್ಬಂದಿ

Gold Price today: ಲಕ್ಷ ಗಡಿ ದಾಟಿದ್ದ ಚಿನ್ನ ಇಂದು ಮತ್ತಷ್ಟು ಏರಿಕೆ

ಮುಂದಿನ ಸುದ್ದಿ
Show comments