Webdunia - Bharat's app for daily news and videos

Install App

ಪಕ್ಷದ ಯುವ ವಿಭಾಗವನ್ನು ಆರಂಭಿಸಲಿರುವ ಆಮ್ ಆದ್ಮಿ

Webdunia
ಸೋಮವಾರ, 15 ಸೆಪ್ಟಂಬರ್ 2014 (17:29 IST)
ಇತ್ತೀಚಿಗೆ ಪಕ್ಷದ ಮಹಿಳಾ ವಿಭಾಗವನ್ನು ಪ್ರಾರಂಭಿಸಿದ್ದ ಆಮ್ ಆದ್ಮಿ ಪಕ್ಷ ಇದೀಗ ಯುವ ವಿಭಾಗವನ್ನು ಪ್ರಾರಂಭಿಸುವ ದಿಶೆಯಲ್ಲಿದೆ.

ಆಪ್ ಯುವ ವಿಭಾಗವನ್ನು ಕ್ರಾಂತಿಕಾರಿ, ಹುತಾತ್ಮ ಭಗತ್ ಸಿಂಗ್ 107 ನೇ ಜನ್ಮ ದಿನಾಚರಣೆಯಂದು( ಸೆಪ್ಟಂಬರ್ 27)  ಔಪಚಾರಿಕವಾಗಿ ಪ್ರಾರಂಭಿಸಲಾಗುವುದು ಎಂದು ಆಪ್ ತಿಳಿಸಿದೆ.
 
ಕಳೆದ ತಿಂಗಳು ಪಕ್ಷ ಮಹಿಳಾ ಘಟಕವನ್ನು ಪ್ರಾರಂಭಿಸಿತ್ತು. 
 
ಆಮ್ ಆದ್ಮಿ ಪಕ್ಷದ ಯುವ ವಿಭಾಗ ಮಹಿಳಾ ರಕ್ಷಣೆ, ನಿರುದ್ಯೋಗ ಮತ್ತು ಯುವ ಜನಾಂಗ ಮತ್ತು  ದೇಶದ ವಿದ್ಯಾರ್ಥಿಗಳ ಹಿತರಕ್ಷಣೆ ವಿಷಯದಲ್ಲಿ ಗಮನವನ್ನು ನೀಡಲಿದೆ ಎಂದು ಪಕ್ಷ ಹೇಳಿದೆ.
 
35 ವರ್ಷದೊಳಗಿನ ಯುವ ಪುರುಷರು ಮತ್ತು ಮಹಿಳೆಯರನ್ನು ಆಪ್ ಯುವ ವಿಭಾಗದ ಸದಸ್ಯರಾಗಿ ಆಯ್ಕೆ ಮಾಡಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. 
ವಿಭಾಗದ ದೆಹಲಿ ಘಟಕವನ್ನು ತಿಲಕ್ ನಗರ್ ಶಾಸಕ ಜರ್ನಲ್ ಸಿಂಗ್ ಮುನ್ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments