Webdunia - Bharat's app for daily news and videos

Install App

ಸಿಂಗಾಪುರದಲ್ಲಿ ಪತ್ನಿಗೆ ಚಿನ್ನದ ಸರ ಖರೀದಿಸಿದ್ದ ತಮಿಳುನಾಡಿನ ವ್ಯಕ್ತಿಗೆ ಲಕ್ಕಿ ಡ್ರಾದಲ್ಲಿ ₹8 ಕೋಟಿ ಬಹುಮಾನ

Sampriya
ಶನಿವಾರ, 30 ನವೆಂಬರ್ 2024 (14:25 IST)
Photo Courtesy X
ಚೆನ್ನೈ: ಇಲ್ಲಿನ ಜ್ಯುವೇಲರಿ ಮಳಿಗೆಯಲ್ಲಿ ಪತ್ನಿಗೆ ಚಿನ್ನದ ಸರ ಖರೀದಿಸಿದ್ದ ತಮಿಳುನಾಡು ಮೂಲದ ವ್ಯಕ್ತಿಯೊಬ್ಬರಿಗೆ ಲಾಟರಿಯ ಮೂಲಕ ಬರೋಬ್ಬರಿ ₹8 ಕೋಟಿ ಬಹುಮಾನ ಸಿಕ್ಕಿದೆ.

ಸಿಂಗಪುರದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಪ್ರೊಜೆಕ್ಟ್ ಎಂಜಿನಿಯರ್ ಆಗಿರುವ ಬಾಲಸುಬ್ರಹ್ಮಣ್ಯಂ ಚಿತಾಂಬರಂ ಎಂಬ ವ್ಯಕ್ತಿಗೆ ಲಕ್ಕಿ ಡ್ರಾದಲ್ಲಿ 1 ಮಿಲಿಯನ್ ಯುಎಸ್ ಡಾಲರ್ ಹಣ (₹8ಕೋಟಿಗೂ ಅಧಿಕ) ದೊರಕಿದೆ.

ಬಾಲಸುಬ್ರಹ್ಮಣ್ಯಂ ಅವರು ನವೆಂಬರ್ 24 ರಂದು ಸಿಂಗಾಪುರದ ಮುಸ್ತಫಾ ಜುವೇಲರಿಯಲ್ಲಿ ಪತ್ನಿಗಾಗಿ ₹84 ಸಾವಿರ ಮೌಲ್ಯದ ಚಿನ್ನದ ಸರವನ್ನು ಖರೀದಿಸಿದ್ದರು. ಇದೇ ವೇಳೆ ಅಂಗಡಿಯಲ್ಲಿ ಚಿನ್ನ ಖರೀದಿಸಿದವರಿಗೆ ಲಕ್ಕಿ ಡ್ರಾ ಬಹುಮಾನ ನಡೆಯುತ್ತಿತ್ತು.

ಅದೃಷ್ಟದಿಂದ ಬಾಲಸುಬ್ರಹ್ಮಣ್ಯಂ ಚಿತಾಂಬರಂ ಅವರು ಡ್ರಾದಲ್ಲಿ ಗೆದ್ದಿದ್ದಾರೆ. ಈ ವಿಚಾರವನ್ನು ಮುಸ್ತಫಾ ಜುವೇಲರಿ ಅವರು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ.

ನನ್ನ ತಂದೆಯ ಪುಣ್ಯಸ್ಮರಣೆಯಂದೇ ನನಗೆ ಈ ಬಹುಮಾನ ಬಂದಿದೆ. ಹಣವನ್ನು ಒಳ್ಳೆಯ ಉದ್ದೇಶಕ್ಕೆ ಬಳಸುತ್ತೇನೆ ಎಂದು ತಮಿಳುನಾಡು ಮೂಲದ ಬಾಲಸುಬ್ರಹ್ಮಣ್ಯಂ ಚಿತಾಂಬರಂ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments