Select Your Language

Notifications

webdunia
webdunia
webdunia
webdunia

ಮಗುವಿನ ಎದೆಗೆ ಕಾಲಿನಿಂದ ಒದೆಯುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮಗುವಿನ ಎದೆಗೆ ಕಾಲಿನಿಂದ ಒದೆಯುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಕೋಲ್ಕತ್ತಾ , ಗುರುವಾರ, 24 ಜುಲೈ 2014 (12:39 IST)
ಹೈದರಾಬಾದ್ ಮೂಲದ ಶಾಲೆಯಲ್ಲಿ ಮೂವರು ದೃಷ್ಟಿಮಾಂದ್ಯ ಮಕ್ಕಳನ್ನು ಅಂಧ ಪ್ರಾಂಶುಪಾಲರು  ನಿರ್ದಯವಾಗಿ ಥಳಿಸುತ್ತಿದ್ದ ವಿಡಿಯೋ ದೃಶ್ಯದ ಆಘಾತಕಾರಿ ತುಣುಕುಗಳು ಬಿಡುಗಡೆಯಾದ ಬಳಿಕ  ಕೊಲ್ಕತ್ತಾದ ಲೇಕ್‌ ಟೌನ್‌ನಲ್ಲಿ ಇಂತಹದ್ದೇ ಮಗುವಿನ ಮೇಲೆ ಅಮಾನುಷ ಹಿಂಸೆಯ ವಿಡಿಯೋ ಬಿಡುಗಡೆಯಾಗಿದೆ.

ಲೇಕ್‌ಟೌನ್‌ನ ಖಾಸಗಿ ಬೋಧಕಿ ಮೂರುವರೆ ವರ್ಷದ ಮಗುವನ್ನು ಅಮಾನುಷವಾಗಿ ಥಳಿಸುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.  ಪೂಜಾ ಸಿಂಗ್ ಎಂಬ ಖಾಸಗಿ ಬೋಧಕಿ ಮಗುವಿಗೆ ಎದೆಯ ಮೇಲೆ ಎರಡು ಬಾರಿ ಕಾಲಿನಿಂದ ಒದ್ದಳು. ಮಗುವಿನ ತಲೆಯನ್ನು ಹಾಸಿಗೆಗೆ ಕುಕ್ಕಿದಳು, ಮಗು ಜೋರಾಗಿ ಕಿರುಚಿಕೊಂಡು ತಾಯಿಯ ಬಳಿ ಹೋಗಬೇಕೆಂದು ಅಂಗಲಾಚಿದರೂ  ಬಿಡದೇ ಮಗುವಿನ ಮುಖದ ಮೇಲೆ ಎಡಬಿಡದೇ ಗುದ್ದಿದಳು.

ಖಾಸಗಿ ಬೋಧಕಿ ಕೇವಲ 3 ದಿನಗಳ ಹಿಂದೆ ಮಗುವಿಗೆ ಬೋಧನೆ ಆರಂಭಿಸಿದ್ದಾಗಿ ಮಗುವಿನ ತಾಯಿ ಹೇಳಿದ್ದಾರೆ. ಎರಡು ದಿನ ಮಗು ಶಿಕ್ಷಕಿಯ ಬಳಿ ಪಾಠ ಕಲಿಯಲು ನಿರಾಕರಿಸಿತ್ತು.ಆಗ ಮನೆ ಪಾಠದ ಶಿಕ್ಷಕಿ ಮಗುವನ್ನು ಕೋಣೆಯಲ್ಲಿ ತನ್ನ ಜೊತೆ ಒಂಟಿಯಾಗಿ ಬಿಡುವಂತೆ ಪೋಷಕರಿಗೆ ಕೇಳಿದಳು. ಅವಳು ಹೇಳಿದಾಗ ನಾನು ಅವಕಾಶ ನೀಡಿದೆ. ಶಿಕ್ಷಕಿ ಮಗುವನ್ನು ಇನ್ನೊಂದು ಕೋಣೆಗೆ ಕರೆದುಕೊಂಡು ಹೋಗಿ ಒಳಗಿನಿಂದ ಚಿಲಕ ಹಾಕಿಕೊಂಡಳು.

ಕೆಲವು ನಿಮಿಷಗಳ ನಂತರ ನನ್ನ ಮಗ ಅಳುತ್ತಿರುವ ಶಬ್ದ ಕೇಳಿಸಿತು ಎಂದು ತಾಯಿ ಶಾಲಿನಿ ದೂರಿದ್ದಾರೆ.  ಆರಂಭದಲ್ಲಿ ಮಗು ಅತ್ತಾಗ ಶಿಕ್ಷಕಿ ಮಗುವಿಗೆ ಕಲಿಸಲು ಯತ್ನಿಸುತ್ತಿದ್ದಾರೆಂದು ತಾಯಿ ಭಾವಿಸಿದ್ದರು.ಆದರ ಮಗು ಕಿರುಚಿಕೊಂಡಾಗ, ಒಳಗಿನಿಂದ ದಡ್, ದಡ್ ಶಬ್ದ ಕೇಳಿದಾಗ ತಾಯಿ ಶಾಲಿನಿ ಕೋಣೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಆನ್ ಮಾಡಿದ್ದರು.ಶಿಕ್ಷಕಿಯ ಇಡೀ ಅಮಾನುಷ ಪ್ರವೃತ್ತಿಯನ್ನು ಕ್ಯಾಮೆರಾ ಸೆರೆಹಿಡಿದಿದೆ.

ಕಬೋರ್ಡ್‌ನಿಂದ ಶಿಕ್ಷಕಿ ಕಳ್ಳತನ ಕೂಡ ಮಾಡಿದ್ದಳು.  ಬುಧವಾರ ತಂದೆ, ತಾಯಿಗಳು ಪೊಲೀಸರಿಗೆ  ತಮ್ಮ ಮಗುವಿನ ಮೇಲೆ ಶಿಕ್ಷಕಿಯ ಚಿತ್ರಹಿಂಸೆ ನೀಡಿದ್ದಾಳೆಂದು ದೂರಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡಿದ್ದಾರೆ.

ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಅಲ್ಲಿನ ವೈದ್ಯರು ಶಿಕ್ಷಕಿಯ ಬಳಿ ಮಗುವನ್ನು ಕಳಿಸದಂತೆ ಸಲಹೆ ಮಾಡಿದ್ದಾರೆ.  ಚಿಕ್ಕಮಕ್ಕಳ ಮೇಲೆ  ಅಮಾನುಷ ವರ್ತನೆ ಮಕ್ಕಳ ಮನಸ್ಸಿನಲ್ಲಿ ಮಾಗದ ಗಾಯವಾಗಿ ಉಳಿಸುತ್ತದೆ ಎಂದು ಹೇಳಿದ್ದಾರೆ. 

Share this Story:

Follow Webdunia kannada