Select Your Language

Notifications

webdunia
webdunia
webdunia
webdunia

ಸುನಂದಾ ಪುಷ್ಕರ್ ನಿಗೂಢ ಸಾವು; ಕನ್ನಡದಲ್ಲಾಗುತ್ತಿದೆ ಸಿನಿಮಾ?

ಸುನಂದಾ ಪುಷ್ಕರ್ ನಿಗೂಢ ಸಾವು; ಕನ್ನಡದಲ್ಲಾಗುತ್ತಿದೆ ಸಿನಿಮಾ?
, ಬುಧವಾರ, 29 ಏಪ್ರಿಲ್ 2015 (12:45 IST)
ಬಾಲಿವುಡ್ ಬೆಡಗಿ, ನೇಪಾಳಿ ಚೆಲುವೆ ಅಭಿನಯಿಸುತ್ತಿರುವ ಕನ್ನಡ ಸಿನಿಮಾ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಶಶಿ ಥರೂರ್ ಪತ್ನಿ ಸುನಂದಾ ಪುಷ್ಕರ್ ಅವರ ನಿಗೂಢ ಸಾವಿನ ಪ್ರಕರಣವನ್ನಾಧರಿಸಿದ ಸಿನಿಮಾ ಎಂದು ಹೇಳಲಾಗುತ್ತಿದೆ. ಸೈನೈಡ್ ಚಿತ್ರದ ಖ್ಯಾತಿಯ ಎ.ಎಮ್.ಆರ್ ರಮೇಶ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 

ಇದು ಕೊಲೆ ರಹಸ್ಯದ ಕುರಿತಾದ ಸಿನಿಮಾ ಎಂದು ರಮೇಶ್ ಸಹ ಹೇಳಿಕೊಂಡಿದ್ದಾರೆ. 
 
ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕ ಕಾಲಕ್ಕೆ ನಿರ್ಮಾಣವಾಗುತ್ತಿರುವ 'ಗೇಮ್' ಎಂಬ ಶೀರ್ಷಿಕೆಯ ಸಿನಿಮಾದಲ್ಲಿ  ನೇಪಾಳಿ ಚೆಲುವೆ ಮೊನಿಷಾ ಸುನಂದಾ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕನ್ನಡ ಮೂಲದ ತಮಿಳು ನಟ ಶ್ಯಾಮ್ ಈ ಚಿತ್ರದಲ್ಲಿ ಮೊನಿಶಾರವರ ಪತಿಯಾಗಿ ಅಭಿನಯಿಸುತ್ತಿದ್ದಾರೆ. ಅರ್ಜುನ್ ಸರ್ಜಾ ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು. ಮುಖ್ಯ ಪಾತ್ರಕ್ಕೆ ಮೊನಿಶಾರವನ್ನು ಆಯ್ಕೆ ಮಾಡುವ ಸಲಹೆ ಕೂಡ ಸರ್ಜಾ ಅವರದ್ದೇ ಅಂತೆ. ಹಲವಾರು ಟ್ವಿಸ್ಟ್‌ಗಳಿರುವ ಈ ಸಿನಿಮಾಕ್ಕೆ ಮೊನಿಯಾ ಅವರೇ ಸೂಕ್ತರು ಎಂದು ಸರ್ಜಾ ಭಾವಿಸಿದರಂತೆ. 
 
"ರಮೇಶ್ ಅವರು ಈ ಕತೆಯನ್ನು ಹೇಳಿದಾಗ ಅದು ತುಂಬಾ ಮೆಚ್ಚಿಗೆಯಾಯಿತು. ತಕ್ಷಣ ನಾನೀ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡೆ. ಪ್ರಥಮ ಬಾರಿ ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ತುಂಬಾ ಖುಷಿ ನೀಡುತ್ತಿದೆ", ಎಂದು ಕೆಲ ದಿನಗಳ ಹಿಂದೆ ನೇಪಾಳಿ ಚೆಲುವೆ ಮಾಧ್ಯಮದವರೊಂದಿಗೆ ಹೇಳಿಕೊಂಡಿದ್ದರು. 

webdunia
ಮಾಜಿ ಕೇಂದ್ರ ಸಚಿವರಾದ ಶಶಿ ಥರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಜನವರಿ 2014ರಲ್ಲಿ ನವದೆಹಲಿಯ ಐಷಾರಾಮಿ ಹೋಟೆಲ್‌ವೊಂದರಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಸಾವಿನ ರಹಸ್ಯ ಇನ್ನು ಕೂಡ ಬಯಲಾಗಿಲ್ಲ. 

Share this Story:

Follow Webdunia kannada