Webdunia - Bharat's app for daily news and videos

Install App

ರಾಮ್‌ಪಾಲ್ ಆಶ್ರಮದಲ್ಲಿ ಪೆಟ್ರೋಲ್ ಬಾಂಬ್, ಗರ್ಭದಾರಣೆ ಪರೀಕ್ಷೆ ಕಿಟ್‌ ಪತ್ತೆ

Webdunia
ಶನಿವಾರ, 22 ನವೆಂಬರ್ 2014 (11:56 IST)
ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ಭಾರೀ ಸಂಗ್ರಹ, ಪೆಟ್ರೋಲ್ ಬಾಂಬ್‌ಗಳು, ಆಸಿಡ್ ಸಿರಿಂಜ್‌ಗಳು, ಮೆಣಸಿನ ಗ್ರೆನೇಡ್ ಮತ್ತು ಗರ್ಭದಾರಣೆ ಪರೀಕ್ಷೆ ಮಾಡುವ ಕಿಟ್ ಮುಂತಾದವು ಸಂತ ರಾಮ್‌ಪಾಲ್  ಅವರನ್ನು ಬಂಧಿಸಿದ ಸರ್ಪಗಾವಲಿನ ಸತ್ಲೋಕ್  ಆಶ್ರಮದ ಒಳಗೆ ಪತ್ತೆಯಾದ ವಸ್ತುಗಳು.
 
ಹರ್ಯಾಣ ಪೊಲೀಸ್‌ನ ಎಸ್‌ಐಟಿ ತಂಡ  ಆಶ್ರಮದೊಳಗೆ ನಡೆಸಿದ ಶೋಧದಲ್ಲಿ ಆಘಾತಕಾರಿ ವಿವರಗಳು ಬೆಳಕಿಗೆ ಬಂದಿದೆ. ರಾಮಪಾಲ್ ಆಶ್ರಮದ ಪಕ್ಕದ ಕೋಣೆಯಲ್ಲಿ ಪೊಲೀಸರು ಗರ್ಭದಾರಣೆ ಪರೀಕ್ಷೆ ಕಿಟ್ ಪತ್ತೆಹಚ್ಚಿದ್ದಾರೆ.
 
ಶೌಚಾಲಯವೊಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯೊಬ್ಬಳನ್ನು ಕೂಡಿ ಹಾಕಿರುವ ಪ್ರಕರಣ ಕೂಡ ವರದಿಯಾಗಿದೆ. ಅವಳನ್ನು ಮಧ್ಯಪ್ರದೇಶದ ಅಶೋಕ್ ನಗರ ಗ್ರಾಮದ ಬಿಜಲೇಶ್ ಎಂದು ಗುರುತಿಸಲಾಗಿದೆ.  ರಾಮ್‌ಪಾಲ್ ಪಕ್ಕದ ಕೋಣೆಯಲ್ಲಿ ಗರ್ಭದಾರಣೆ ಪರೀಕ್ಷೆ ಕಿಟ್ ಪತ್ತೆಯಾಗಿರುವುದರಿಂದ ರಾಮ್‌ಪಾಲ್  ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿರಬಹುದೆಂದು ಶಂಕಿಸಲಾಗಿದೆ.
 
ತಂಡವು 32 ಬೋರ್ ರಿವಾಲ್ವರ್‌ಗಳು, 10 ಏರ್ ಗನ್‌ಗಳು, ಎರಡು ಡಿಬಿಬಿಎ 12 ಬೋರ್, ಎರಡು .315 ಬೋರ್ ರೈಫಲ್‌ಗಳನ್ನು ಮತ್ತು ಗುಂಡುಗಳನ್ನು ಪತ್ತೆಹಚ್ಚಿದ್ದಾರೆ. ಬಹುತೇಕ ಶಸ್ತ್ರಾಸ್ತ್ರಗಳನ್ನು ಎರಡು ಗುಪ್ತ ಕೋಣೆಗಳ ಚೀಲಗಳು ಮತ್ತು ಅಲ್ಮೇರಾದಲ್ಲಿ ಇರಿಸಲಾಗಿತ್ತು. ಆಶ್ರಮದ ಮಧ್ಯದಲ್ಲಿ ರಾಮ್‌ಪಾಲ್ ಎತ್ತರಿಸಿದ ರಚನೆಯಲ್ಲಿ ಆಸನದ ಮೇಲೆ ಕುಳಿತುಕೊಳ್ಳುತ್ತಿದ್ದರು.

ಎತ್ತರಿಸಿದ ರಚನೆಯಲ್ಲಿ ಮದ್ದುಗುಂಡುಗಳನ್ನು ಅಡಗಿಸಿಡಲಾಗಿದ್ದು, ಆ ಸ್ಥಳದ ಬಗ್ಗೆ ಯಾರಿಗೂ ಅನುಮಾನ ಬರುತ್ತಿರಲಿಲ್ಲ. ಪೊಲೀಸರು ನಡೆಸಿದ ಶೋಧದಲ್ಲಿ ಒಂದು ಖಾಸಗಿ ಈಜು ಕೊಳ, ಎಲಿವೇಟರ್‌ಗಳು ಮತ್ತು 24 ಎಸಿ ಕೋಣೆಗಳು ಪತ್ತೆಯಾಗಿವೆ. ಒಂದು ಕೋಣೆಯಲ್ಲಿ ಮಸಾಜ್ ಹಾಸಿಗೆಯಿದ್ದು, ಇನ್ನೊಂದು ಟ್ರೆಡ್‌‌ಮಿಲ್ ಹೊಂದಿದೆ.

ವಿಸ್ತಾರ ಸಂಕೀರ್ಣದ ಕೆಲವು ಮುಖ್ಯಸ್ಥಳಗಳಲ್ಲಿ ಅಳವಡಿಸಲಾದ ಅನೇಕ ಸಿಸಿಟಿವಿ ಕ್ಯಾಮೆರಾಗಳಿಂದ ಭಕ್ತರ ಚಲನವಲನಗಳ ಬಗ್ಗೆ ಸತತ ಕಣ್ಗಾವಲು ಇರಿಸಲಾಗಿತ್ತು. ಶೋಧ ಕಾರ್ಯಾಚರಣೆಯಲ್ಲಿ ಭಾರೀ ಮೊತ್ತದ ತಿನಿಸುಗಳು ಪತ್ತೆಯಾಗಿದ್ದು ಹೈಕೋರ್ಟ್ ಆದೇಶದ ಮೇಲೆ ಆಹಾರ ಇಲಾಖೆ ವಿಲೇವಾರಿ ಮಾಡಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments