Select Your Language

Notifications

webdunia
webdunia
webdunia
webdunia

ಬಾಲಕಿಯ ಮೇಲೆ ಹೆಡ್‌ಮಾಸ್ಟರ್ ಲೈಂಗಿಕ ದೌರ್ಜನ್ಯ

ಬಾಲಕಿಯ ಮೇಲೆ ಹೆಡ್‌ಮಾಸ್ಟರ್ ಲೈಂಗಿಕ ದೌರ್ಜನ್ಯ
ಚೆನ್ನೈ , ಮಂಗಳವಾರ, 16 ಸೆಪ್ಟಂಬರ್ 2014 (19:56 IST)
11 ವರ್ಷ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ತಿರುನಲ್ವೇಲಿ ಜಿಲ್ಲೆಯ ಶಾಲೆಯೊಂದರ ಮುಖ್ಯೋಪಾಧ್ಯಾಯರನ್ನು ಪೊಲೀಸರು ಬಂಧಿಸಿದ್ದಾರೆ. ನಂಗುನೇರಿ ಮಹಿಳಾ ಠಾಣೆ ಪೊಲೀಸರು ಮುಖ್ಯೋಪಾಧ್ಯಾಯ ಸುಬ್ರಮಣಿ ವಿರುದ್ಧ ಸಂತ್ರಸ್ತೆಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಿದ್ದಾರೆ.

ನಂಗುನೇರಿ ಬಳಿಯ ಸುರಾಕುಡಿ ಪಂಚಾಯತ್ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಸುದೀರ್ಘ ಕಾಲದಿಂದ ಹೆಡ್‌ಮಾಸ್ಟರ್ ಬಾಲಕಿಯನ್ನು ಲೈಂಗಿಕ ಶೋಷಣೆಗೆ ಗುರಿಮಾಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಬಾಲಕಿ ತನಗೆ ಹೊಟ್ಟೆನೋವೆಂದು ದೂರು ನೀಡಿದಾಗ ತಿರುನಲ್ವೇಲಿ ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗಾಗಿ ಬಾಲಕಿಯನ್ನು ಕಳಿಸಿದಾಗ ನಿಜವಿಷಯ ಬಯಲಾಗಿದೆ. 

Share this Story:

Follow Webdunia kannada