Webdunia - Bharat's app for daily news and videos

Install App

ಪೊಲೀಸ್‌ ಪೇದೆಯನ್ನೇ ದರೋಡೆ ಮಾಡಿದ ಪುಟ್ಟ ಬಾಲಕಿ

Webdunia
ಗುರುವಾರ, 23 ಏಪ್ರಿಲ್ 2015 (10:17 IST)
9 ವರ್ಷದ ಬಾಲಕಿಯೊಬ್ಬಳು  ಪೊಲೀಸ್ ಪೇದೆಗೆ ಚಳ್ಳೆ ಹಣ್ಣು ತಿನ್ನಿಸಿ ಆತನಿಂದ 4 ಲಕ್ಷ ರೂಪಾಯಿಗಳನ್ನು ಎಗರಿಸಿದ ಘಟನೆ  ಮಥುರಾದಲ್ಲಿ ಬುಧವಾರ ನಡೆದಿದೆ
 
ಕೊತ್ವಾಲಿ ಎಂಬಲ್ಲಿ ಈ ಘಟನೆ ನಡೆದಿದ್ದು, ಎಸ್‌ಬಿಐ ಬ್ಯಾಂಕ್‌ನ ಚೌಕ ಬಾಗ್ ಬಹಾದೂರ್ ಶಾಖೆಯ ಮುಂದೆ ನಿಂತಿದ್ದ ಪೊಲೀಸ್ ಪೇದೆ ವಿಜಯ್ ಸಿಂಗ್ ಪಾಲ್ ಅವರ ಬಳಿ ಬಂದ ಬಾಲಕಿಯೊಬ್ಬಳು ನಿಮ್ಮ ಪ್ಯಾಂಟ್ ಕೊಳೆಯಾಗಿದೆ ನೋಡಿ ಎಂದು ಹೇಳಿದ್ದಾಳೆ. ಆಗ ತನ್ನ ಕೈಯ್ಯಲ್ಲಿದ್ದ ಹಣದ ಬ್ಯಾಗ್‌ನ್ನು ಕೆಳಗಿಟ್ಟ ಪೊಲೀಸ್ ಪ್ಯಾಂಟ್ ಧೂಳು ಕೊಡವಿಕೊಳ್ಳಲು ಮುಂದಾಗಿದ್ದಾನೆ. ಅಷ್ಟರಲ್ಲಿ ಮಿಂಚಿನ ವೇಗದಲ್ಲಿ ಬ್ಯಾಗ್ ಲಪಟಾಯಿಸಿದ ಬಾಲಕಿ ಸ್ಥಳದಿಂದ ಮಾಯವಾಗಿದ್ದಾಳೆ.ಈ ಕುರಿತು ಪೇದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
 
ಪೇದೆ ಆಗ್ರಾದಲ್ಲಿ ಸೇವೆ ಸಲ್ಲಿಸುತ್ತಿದ್ದು, ಆತನ ಕುಟುಂಬ ಸದರ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಔರಂಗಾಬಾದ್ ಗ್ರಾಮದಲ್ಲಿ ವಾಸವಾಗಿದೆ. ಇನ್ನು 15 ದಿನಗಳಲ್ಲಿ ಆತನ ಮಗಳ ಮದುವೆ ನಡೆಯಬೇಕಿದ್ದು, ಈ ಹಿನ್ನೆಲೆಯಲ್ಲಿ ಆತ ಬ್ಯಾಂಕ್‌ನಿಂದ ಹಣವನ್ನು ಡ್ರಾ ಮಾಡಿಕೊಂಡು ಮನೆಗೆ ಹೊರಟಿದ್ದ ಎಂದು ಹೇಳಲಾಗುತ್ತಿದೆ. 
 
ಹುಡುಗಿ ಶಂಕಿತ ಬಚ್ಚಾ ಗ್ಯಾಂಗ್ ಸದಸ್ಯೆಯಾಗಿರಬೇಕೆಂದು ಪೊಲೀಸರು ಶಂಕಿಸಿದ್ದು ಆಕೆಯ ಪತ್ತೆಗೆ ಬಲೆ ಬೀಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments