Select Your Language

Notifications

webdunia
webdunia
webdunia
webdunia

ಕಳ್ಳರ ಜತೆ ಕಾದಾಡಿ ಅವರನ್ನು ಪೋಲಿಸರಿಗೆ ಒಪ್ಪಿಸಿದ 85 ವರ್ಷದ ನಿವೃತ್ತ ಶಿಕ್ಷಕಿ

ಕಳ್ಳರ ಜತೆ ಕಾದಾಡಿ ಅವರನ್ನು ಪೋಲಿಸರಿಗೆ ಒಪ್ಪಿಸಿದ 85 ವರ್ಷದ ನಿವೃತ್ತ ಶಿಕ್ಷಕಿ
ರಾತ್ಲಮ್ , ಮಂಗಳವಾರ, 22 ಜುಲೈ 2014 (18:52 IST)
ತನ್ನ ಮನೆಯಲ್ಲಿ ಕಳ್ಳತನ ಮಾಡಲು ಬಂದ ಇಬ್ಬರು ಕಳ್ಳರನ್ನು ಹಿಡಿಯಲು ಸಹಾಯ ಮಾಡಿದ್ದಕ್ಕಾಗಿ 85 ವರ್ಷದ ನಿವೃತ್ತ ಸರಕಾರಿ ಶಾಲಾ ಶಿಕ್ಷಕಿಯೊಬ್ಬರನ್ನು ಪೋಲಿಸ್ ಇಲಾಖೆಯವರು ಸನ್ಮಾನಿಸಿದ ಘಟನೆ ಮಧ್ಯಪ್ರದೇಶದಲ್ಲಿ ವರದಿಯಾಗಿದೆ. 

ಪತಿಯನ್ನು ಕಳೆದುಕೊಂಡಿರುವ ಪ್ರೇಮಲತಾ ರಾತ್ಲಮ್‌ನ ಬ್ಯಾಂಕ್ ಕಾಲೋನಿಯಲ್ಲಿ  ಒಂಟಿಯಾಗಿ ವಾಸಿಸುತ್ತಿದ್ದು, ಆಕೆಯ ನಾಲ್ಕು ಜನ ಗಂಡು ಮಕ್ಕಳು ಮುಂಬೈನಲ್ಲಿ ಉದ್ಯೋಗದಲ್ಲಿದ್ದಾರೆ. 
 
ಶನಿವಾರ ರಾತ್ರಿ ಆಕೆ ಮಲಗಿದ್ದಾಗ ಇಬ್ಬರು ಯುವಕರು ಆಕೆಯ ಮನೆ ಒಳಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಮನೆಯ ಹೊರಗಿನ ಕಬ್ಬಿಣದ ಸರಳುಗಳನ್ನು ಕಳ್ಳರು ಕತ್ತರಿಸುತ್ತಿದ್ದ ಶಬ್ಧವನ್ನು ಕೇಳಿದ ಅವರಿಗೆ ನಿದ್ದೆಯಿಂದ ಎಚ್ಚರವಾಗಿದೆ. 
 
ಒಬ್ಬ ಕಳ್ಳನನ್ನು ಕೈಯಿಂದ ಹಿಡಿದ ಆಕೆ ಅಲ್ಲೇ ಇದ್ದ ಕೋಲನ್ನು ತೆಗೆದುಕೊಂಡು ಅವರಿಬ್ಬರಿಗೆ ಥಳಿಸುತ್ತ ಕೂಗಿಕೊಂಡಿದ್ದಾರೆ. 
 
ಆಕೆ ಕಳ್ಳರ ಜತೆ ಹೋರಾಡುತ್ತಲೇ ನೆರೆಹೊರೆಯವರನ್ನು ಕರೆದಿದ್ದಾರೆ.  ಆಕೆಯ  ಕೂಗು ಕೇಳಿ ಎಚ್ಚರಗೊಂಡ ನೆರೆಮನೆಯವರು ತಕ್ಷಣ ಸ್ಟೇಶನ್ ರಸ್ತೆ ಪೋಲಿಸ್ ಠಾಣೆಗೆ ಕರೆ ಮಾಡಿದ್ದಾರೆ. ಹಾಗಾಗಿ 10 ನಿಮಿಷದ ಒಳಗೆ ಸ್ಥಳಕ್ಕೆ ತಲುಪಿದ ಪೋಲಿಸರು ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. 
 
ಕಳ್ಳರನ್ನು ಗುರುತಿಸಲು ಆಕೆಯನ್ನು ಕರೆದಾಗ ಅವರನ್ನು ಸ್ಪಷ್ಟವಾಗಿ ಗುರುತಿಸಿದ ಆಕೆ ಶಾಲೆಯಲ್ಲಿ ಮಕ್ಕಳಿಗೆ ತಾವು ಕೊಡುತ್ತಿದ್ದ ಉಟಾಬಸ್ ಶಿಕ್ಷೆಯನ್ನು ಕಳ್ಳರಿಂದಲೂ ಮಾಡಿಸಿದರು. 
 
ಅವರ ಸಾಹಸಕ್ಕೆ ಮೆಚ್ಚಿದ ಪೋಲಿಸರು ಅವರಿಗೆ 5,000 ರೂಪಾಯಿ ಮತ್ತು ಒಂದು ಮೊಬೈಲ್ ಫೋನ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಆರೋಪಿಗಳನ್ನು ಬಂಧನಕ್ಕೆ ಒಳಪಡಿಸಲಾಗಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪೋಲಿಸರು ತಿಳಿಸಿದ್ದಾರೆ. 

Share this Story:

Follow Webdunia kannada