Select Your Language

Notifications

webdunia
webdunia
webdunia
webdunia

ಅತ್ಯಾಚಾರ ಮಾಡಿ, ಬಾಯಿ ಮುಚ್ಚಿಸಲು 2 ರೂಪಾಯಿ ನೀಡಿದ

ಅತ್ಯಾಚಾರ ಮಾಡಿ, ಬಾಯಿ ಮುಚ್ಚಿಸಲು 2 ರೂಪಾಯಿ ನೀಡಿದ
ಮೀರ‌ಗಂಜ್‌ , ಗುರುವಾರ, 18 ಫೆಬ್ರವರಿ 2016 (11:54 IST)
8 ವರ್ಷದ ಪುಟ್ಟ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಗೈದು ಯಾರಿಗೆ ಹೇಳದಂತೆ ಬಾಯಿಮುಚ್ಚಿಸಲು 2 ರೂಪಾಯಿ ನೀಡಿದ ಹೇಯ ಘಟನೆ ಮೀರ‌ಗಂಜ್‌ನಲ್ಲಿ ನಡೆದಿದೆ. 

ದೊರೆತಿರುವ ಮಾಹಿತಿಗಳ ಪ್ರಕಾರ ಇಬ್ಬರು ಬಾಲೆಯರು ಶಾಲೆಗೆ ಹೋಗುತ್ತಿರುವಾಗ ವ್ಯಕ್ತಿಯೊಬ್ಬ ಹಣ ಕೊಡುವ ಆಮಿಷ ಒಡ್ಡಿ  ಅವರನ್ನು ಕಾಡಿಗೆ ಕರೆದೊಯ್ದ. ಇಬ್ಬರು ಮಕ್ಕಳಲ್ಲಿ ಒಬ್ಬಳ ಮೇಲೆ ಅತ್ಯಾಚಾರಗೈದ ಆತ ಇನ್ನೊಬ್ಬಳು ಅಲ್ಲಿಂದ ಪರಾರಿಯಾಗಲು ಯತ್ನಿಸಿದಾಗ ಆಕೆಯನ್ನು ಹಿಡಿದು ಥಳಿಸಿದ. ಬಳಿಕ ಇಬ್ಬರ ಕೈಗೆ 2 ರೂಪಾಯಿ ಕೊಟ್ಟು ಯಾರಿಗೂ ಹೇಳದಿರೆಂದು ತಾಕೀತು ಮಾಡಿದ್ದಾನೆ. 
 
ಇಬ್ಬರು ಮಕ್ಕಳು ಮನೆಗೆ ಹಿಂತಿರುಗಿದಾಗ ಅವರ ಮೈಕೈಗೆ ಗಾಯವಾಗಿರುವುದನ್ನು ಕಂಡು ಫೋಷಕರು ಆಘಾತಕ್ಕೀಡಾಗಿದ್ದಾರೆ. ಅತ್ಯಾಚಾರಕ್ಕೊಳಗಾದ ಮಗುವಿನ ಗುಪ್ತಾಂಗದಿಂದ ರಕ್ತಸ್ರಾವವಾಗುತ್ತಿದ್ದುದರಿಂದ ಆಕೆಯ ಮೇಲೆ ಅತ್ಯಾಚಾರವಾಗಿರುವ ಬಗ್ಗೆ ಪೋಷಕರಿಗೆ ಸುಳಿವು ಲಭಿಸಿದೆ. 
 
ತಕ್ಷಣ ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಯಿತು. ಆದರೆ ಗಂಭೀರ ಸ್ಥಿತಿಯಲ್ಲಿದ್ದ ರೇಪ್ ಪೀಡಿತೆಯನ್ನು  ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಯಿತು. 
 
ಅಪರಿಚಿತ ಆರೋಪಿಯ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. 

Share this Story:

Follow Webdunia kannada