Select Your Language

Notifications

webdunia
webdunia
webdunia
webdunia

70 ವರ್ಷದ ಮಾಜಿ ಸೈನಿಕನಿಂದ 2 ವರ್ಷದ ಹಸುಳೆಯ ಮೇಲೆ ಅತ್ಯಾಚಾರ

70 ವರ್ಷದ ಮಾಜಿ ಸೈನಿಕನಿಂದ 2 ವರ್ಷದ ಹಸುಳೆಯ ಮೇಲೆ ಅತ್ಯಾಚಾರ
ಜೈಪುರ್ , ಗುರುವಾರ, 28 ಆಗಸ್ಟ್ 2014 (06:57 IST)
ಅತಿ ಘೋರ ಎನಿಸುವ ಕೃತ್ಯವೊಂದು  ರಾಜಸ್ಥಾನದಲ್ಲಿ ವರದಿಯಾಗಿದ್ದು 70 ವರ್ಷದ ವೃದ್ಧನೊಬ್ಬ 2 ವರ್ಷದ ಪುಟ್ಟ ಹಸುಳೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. 

ಹನುಮಘರ್ ಜಿಲ್ಲೆಯ ಮಕ್ಕಾಸರ್ ಎಂಬ ಹಳ್ಳಿಯಲ್ಲಿ ಮಂಗಳವಾರ ಸಂಜೆ ಈ ಅಮಾನುಷ ಘಟನೆ ನಡೆದಿದೆ. ಈ ಪ್ರಕರಣ ಪೋಲಿಸರನ್ನು ಕೂಡ ಆಘಾತಗೊಳ್ಳುವಂತೆ ಮಾಡಿದ್ದು ಆರೋಪಿಯ ಮೇಲೆ ಪ್ರಕರಣ ದಾಖಲಿಸಿ ಮೂರು ದಿನಗಳ ಒಳಗೆ ತನಿಖೆಯನ್ನು ಮುಗಿಸುತ್ತೇವೆ ಎಂದು ಪೋಲಿಸರು ಹೇಳಿದ್ದಾರೆ. 
 
ಪೋಲಿಸರ ಪ್ರಕಾರ ಮಗು ತನ್ನ ಮನೆಯ ಹತ್ತಿರ ಕೆಲವು ಮಕ್ಕಳೊಂದಿಗೆ ಆಟವಾಡುತ್ತಿತ್ತು. ಆ ಸಮಯದಲ್ಲಿ ಅಲ್ಲಿಗೆ ಬಂದ  ಮಾಜಿ ಸೈನಿಕ ಗುರ್ಬಜ್ ಸಿಂಗ್ ಆಕೆಯನ್ನೆತ್ತಿಕೊಂಡು ತನ್ನ ಮನೆಯೊಳಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ . ಆಟವಾಡುತ್ತಿದ್ದ ಮಗು ಕಾಣದಾದುದನ್ನು ಗಮನಿಸಿದ ಕೆಲವರು ಆಕೆಯ ಪಾಲಕರಿಗೆ ಮಾಹಿತಿ ನೀಡಿದ್ದಾರೆ. ಮಗುವಿನ ಜತೆ ಆಟವಾಡುತ್ತಿದ್ದ ಇನ್ನೊಂದು ಮಗುವೊಂದು  ವೃದ್ಧ ಆಕೆಯನ್ನು ಎತ್ತಿಕೊಂಡು ತನ್ನ ಮನೆ ಒಳಗೆ ಹೋದ ವಿಚಾರವನ್ನು ಹೇಳಿದೆ.
 
ಆಗ ಆತನ ಮನೆಗೆ ನುಗ್ಗಿದ ಸ್ಥಳೀಯರು ವೃದ್ಧನನ್ನು ಹಿಡಿದು ಪೋಲಿಸರಿಗೆ  ಒಪ್ಪಿಸಿದ್ದಾರೆ ಎಂದು ಪೋಲಿಸ್ ಅಧಿಕಾರಿ ಶರತ್ ಕವಿರಾಜ್  ತಿಳಿಸಿದ್ದಾರೆ. 
 
ಘಟನೆ ಕುರಿತು ಗ್ರಾಮದಲ್ಲೆಲ್ಲ ಸುದ್ದಿ ಹಬ್ಬುತ್ತಿದ್ದಂತೆ  ಜನರೆಲ್ಲ ಪೋಲಿಸ್ ಠಾಣೆ ಮುಂದೆ ಜಮಾವಣೆಗೊಂಡು ಆರೋಪಿಯನ್ನು ತಮಗೆ ಒಪ್ಪಿಸುವಂತೆ ಒತ್ತಾಯಿಸಿದ್ದಾರೆ. 
 
ಘಟನೆಯಿಂದ ತೀವೃ ಆಖಾತಗೊಂಡಿರುವ ಪೀಡಿತ ಮಗುವಿನ ಮನೆಗೆ ಭೇಟಿ ನೀಡಿರುವ ಪೋಲಿಸರು ಪ್ರಕರಣವನ್ನು ಗಂಭೀರ ತನಿಖೆಗೆ ಒಳಪಡಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ.
 
ಅಸ್ವಸ್ಥ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

Share this Story:

Follow Webdunia kannada