Select Your Language

Notifications

webdunia
webdunia
webdunia
webdunia

ಅತ್ಯಾಚಾರಿಯನ್ನು ಬಂಧಿಸಲು ನೆರವಾದ 7ರ ಬಾಲಕ

ಅತ್ಯಾಚಾರಿಯನ್ನು ಬಂಧಿಸಲು ನೆರವಾದ 7ರ ಬಾಲಕ
ನವದೆಹಲಿ , ಮಂಗಳವಾರ, 16 ಫೆಬ್ರವರಿ 2016 (14:32 IST)
7 ವರ್ಷದ ಪುಟ್ಟ ಬಾಲಕನೊಬ್ಬ ತನ್ನ ಗೆಳತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಬಂಧಿಸಲು ಪೊಲೀಸರಿಗೆ ನೆರವು ನೀಡಿದ ಘಟನೆ ದೆಹಲಿಯಲ್ಲಿ ನಡೆದಿದೆ. ಪುಟ್ಟ ಬಾಲಕನ ಸಹಾಯದಿಂದ ಘಟನೆ ನಡೆದ 48 ಗಂಟೆಗಳೊಳಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 
 
ಕಳೆದ ಶುಕ್ರವಾರ ದಿನ ಬಾಲಕ ಮತ್ತು ಪೀಡಿತ ಬಾಲಕಿ ತಿಲಕ ನಗರ ಪ್ರದೇಶದ ಪಾರ್ಕ್ ಒಂದರಲ್ಲಿ ಆಟವಾಡುತ್ತಿದ್ದರು. ಆ ಸಮಯದಲ್ಲಿ ಅಲ್ಲಿಗೆ ಬಂದ ಆರೋಪಿ ತಿಶಾನ್(22) ಬಾಲಕಿಗೆ ತಿಂಡಿ ಕೊಡಿಸುವ ಆಮಿಷ ಒಡ್ಡಿ ಕರೆದೊಯ್ದಿದ್ದ. 
 
ಬಾಲಕನನ್ನು ಘಟನೆ ನಡೆದ ಸ್ಥಳ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಪ್ರದೇಶಗಳಿಗೂ ಪೊಲೀಸರು ಕರೆದೊಯ್ದರು. ಆತ ಅವರಿಗೆ ಸಹಾಯಕವಾಗುವಂತಹ ಎಲ್ಲ ಮಾಹಿತಿಗಳನ್ನು ನೀಡಿದ ಮತ್ತು ಆರೋಪಿಯನ್ನು ಸ್ಪಷ್ಟವಾಗಿ ಗುರುತಿಸಿದ. ಆತ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಸೋಮವಾರ ಬೆಳಿಗ್ಗೆ ಆರೋಪಿಯನ್ನು ಬಂಧಿಸಿದ್ದಾರೆ. 
 
ಹಿರಿಯ ಪೊಲೀಸ್ ಅಧಿಕಾರಿಗಳು ಸಹ ಬಾಲಕನ ಬುದ್ಧಿವಂತಿಕೆ ತಲೆದೂಗಿದ್ದು, ಆತನಿಗೆ ವಿಶೇಷ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. 
 
ನನ್ನ ಮನೆಗೆ ಬಂದ ಪೊಲೀಸರು ಎರಡು ದಿನಗಳ ಕಾಲ ನನ್ನನ್ನು ಹಲವು ಪ್ರದೇಶಗಳಿಗೆ ಕೊಂಡೊಯ್ದರು. ನನ್ನ ಗೆಳತಿಯ ಮೇಲೆ ಅತ್ಯಾಚಾರವಾಗಿದ್ದ ಸ್ಥಳಕ್ಕೂ ಸಹ ನನ್ನನ್ನು ಕೊಂಡೊಯ್ದಿದ್ದರು. ತಾನು ಪೊಲೀಸ್ ಅಧಿಕಾರಿಯಾಗಲು ಬಯಸುತ್ತೇನೆ. ನನ್ನ ಕನಸನ್ನು ನನಸಾಗಿಸಿಕೊಳ್ಳಲು ಚೆನ್ನಾಗಿ ಓದುತ್ತೇನೆ ಎನ್ನುತ್ತಾನೆ ಪುಟ್ಟ ಬಾಲಕ.
 

Share this Story:

Follow Webdunia kannada