Webdunia - Bharat's app for daily news and videos

Install App

ಕ್ಷುಲ್ಲಕ ಕಾರಣಕ್ಕೆ ವೃದ್ಧ ಮಹಿಳೆ ಬಟ್ಟೆ ಬಿಚ್ಚಿ ತಪಾಸಣೆ ಮಾಡಿದ ಟಿಸಿಗಳ ಅಮಾನತು

Webdunia
ಸೋಮವಾರ, 28 ಜುಲೈ 2014 (18:55 IST)
ದ್ವಿತೀಯ ದರ್ಜೆಯ ಟಿಕೆಟ್ ತೆಗೆದುಕೊಂಡು, ಅರಿವಿಲ್ಲದೇ ಪ್ರಥಮ ದರ್ಜೆ ಬೋಗಿಯನ್ನು ಪ್ರವೇಶಿಸಿದ್ದಕ್ಕಾಗಿ 65 ವರ್ಷದ ಮಹಿಳೆಯ ಬಟ್ಟೆ ಬಿಚ್ಚಿಸಿ ಶೋಧ ನಡೆಸಿದ ಇಬ್ಬರು ಮಹಿಳಾ ಟಿಕೆಟ್ ಪರಿಶೀಲನಾಕಾರರನ್ನು ಸೇವೆಯಿಂದ ಅಮಾನತುಗೊಳಿಸಿದ ಘಟನೆ ಮುಂಬೈನಲ್ಲಿ ಜರುಗಿದೆ.

ಪ್ರಕರಣದ ಪ್ರಾಥಮಿಕ ತನಿಖೆಯ ನಂತರ ಇಬ್ಬರು  ಮಹಿಳಾ ಟಿಕೆಟ್ ಪರಿಶೀಲನಾಕಾರರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಪಶ್ಚಿಮ ರೈಲ್ವೆ ವಿಭಾಗೀಯ ರೈಲ್ವೆ ಮ್ಯಾನೇಜರ್ ಶೈಲೇಂದ್ರ ಕುಮಾರ್ ತಿಳಿಸಿದ್ದಾರೆ. 
.
ಜುಲೈ 25 ರಂದು ನಡೆದ ಘಟನೆಯಲ್ಲಿ ಅಂಧೇರಿ ನಿಲ್ದಾಣದಲ್ಲಿ ಲೋಕಲ್ ಟ್ರೇನ್ ಹತ್ತಿದ ಪೀಡಿತೆ ಎರಡನೇ ದರ್ಜೆ ಬೋಗಿಯ ಬದಲು, ಅರಿವಿಲ್ಲದೇ ಪ್ರಥಮ ದರ್ಜೆ ಬೋಗಿಗೆ ಪ್ರವೇಶಿಸಿದ್ದಾರೆ ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ. 
 
ಟಿಕೆಟ್ ಪರಿಶೀಲನಾಕಾರರು ಬಂದು ಟಿಕೆಟ್ ತೋರಿಸುವಂತೆ ಕೇಳಿದಾಗ, ಆಕೆ ಸೆಕೆಂಡ್ ಕ್ಲಾಸ್ ಟಿಕೆಟ್ ಹೊಂದಿರುವುದು ಬೆಳಕಿಗೆ ಬಂದಿದೆ. ಆಕೆಯನ್ನು ಮೀರಾ ರಸ್ತೆ ನಿಲ್ದಾಣದಲ್ಲಿ ಇಳಿಸಲಾಯಿತು ಮತ್ತು ಟಿಕೆಟ್ ಪರಿಶೀಲನಾಕಾರರ ಕಚೇರಿಗೆ ಕರೆದುಕೊಂಡು ಹೋಗಲಾಯಿತು.  ಆಕೆಗೆ ದಂಡವನ್ನು ಕಟ್ಟಲು ಹೇಳಿದಾಗ ತಾನು 25 ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಹೊಂದಿಲ್ಲ ಎಂದು ಆಕೆ ತಿಳಿಸಿದ್ದಾಳೆ. ಆಗ ಆಕೆಯನ್ನು ಅವಾಚ್ಛ ಶಬ್ಧಗಳಿಂದ ಬೈದ ಅಧಿಕಾರಿಗಳು  ಆಕೆ ಸುಳ್ಳು ಹೇಳುತ್ತಿಲ್ಲ ಎಂದು ಸಾಬೀತು ಪಡಿಸಲು ಬಟ್ಟೆ ಬಿಚ್ಚುವಂತೆ ಹೇಳಿದ್ದಾರೆ ಎಂದು ಆಕೆಯ ಅಳಿಯ ಹೇಳಿದ್ದಾನೆ. 
 
ಕೇವಲ ಅಧಿಕಾರಿಗಳನ್ನು ಅಮಾನತುಗೊಳಿಸುವುದು ಸಮಸ್ಯೆಗೆ ಪರಿಹಾರವಾಗಲಾರದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೀಡಿತೆಯ ಅಳಿಯ ಒತ್ತಾಯಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments