Select Your Language

Notifications

webdunia
webdunia
webdunia
webdunia

ದೇಶದಲ್ಲಿ ಒಂದು ದಿನಕ್ಕೆ 57 ಅತ್ಯಾಚಾರಗಳು, ಗಂಟೆಗೆ ಸರಾಸರಿ 2 ಪ್ರಕರಣಗಳು

ದೇಶದಲ್ಲಿ ಒಂದು ದಿನಕ್ಕೆ 57 ಅತ್ಯಾಚಾರಗಳು, ಗಂಟೆಗೆ ಸರಾಸರಿ  2 ಪ್ರಕರಣಗಳು
, ಮಂಗಳವಾರ, 29 ಜುಲೈ 2014 (12:07 IST)
ಮಹಿಳೆಯರ ವಿರುದ್ಧ  ಅತ್ಯಾಚಾರ ಸೇರಿದಂತೆ ಹಿಂಸಾತ್ಮಕ ಅಪರಾಧಗಳು ಏರುತ್ತಲೇ ಇರುವ ನಡುವೆ, ಅಪರಾಧ ಅಂಕಿಅಂಶಗಳ 13 ವರ್ಷಗಳ ವಿಶ್ಲೇಷಣೆಯ ಪ್ರಕಾರ,  ದೇಶದಲ್ಲಿ ಒಂದು ದಿನಕ್ಕೆ 57 ಕ್ಕೂ ಹೆಚ್ಚು ಅತ್ಯಾಚಾರಗಳು, ಸರಾಸರಿ ಪ್ರತಿ ಗಂಟೆಗೆ ಎರಡು ಅತ್ಯಾಚಾರಗಳು ನಡೆಯುತ್ತಿರುವ ವಿಷಯ  ಬಯಲಾಗಿದೆ.

28 ರಾಜ್ಯಗಳಲ್ಲಿ ಮತ್ತು ಏಳು ಕೇಂದ್ರಾಡಳಿತ ಪ್ರದೇಶಗಳಲ್ಲಿ 13 ವರ್ಷಗಳ ಅವಧಿಯಲ್ಲಿ  ಒಟ್ಟು 2,72,844 ರೇಪ್ ಪ್ರಕರಣಗಳು ವರದಿಯಾಗಿದೆ. ಕಾಮನ್‌ವೆಲ್ತ್ ಮಾನವ ಹಕ್ಕು ಉಪಕ್ರಮ ವಿಶ್ಲೇಷಣೆಯಲ್ಲಿ 2001ರಿಂದ 2013ರ ಅವಧಿಯಲ್ಲಿ  2,64, 130 ರೇಪ್ ಕೇಸ್‌ಗಳು 28 ರಾಜ್ಯಗಳಲ್ಲಿ ವರದಿಯಾಗಿವೆ. ಇದು ಸರಾಸರಿ ಒಂದು ದಿನಕ್ಕೆ 56 ಪ್ರಕರಣಗಳಾಗುತ್ತವೆ. ಏಳು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸರಾಸರಿ 2 ರೇಪ್ ಪ್ರಕರಣಗಳು ವರದಿಯಾಗಿದೆ.

ಈ ಅವಧಿಯಲ್ಲಿ ದೆಹಲಿಯಲ್ಲಿ 8,060 ಪ್ರಕರಣಗಳು ವರದಿಯಾಗಿದೆ.  ರೇಪ್‌ಕೇಸ್‌ಗಳು ವರ್ಷದಿಂದ ವರ್ಷಕ್ಕೆ ಏರುತ್ತಲೇ ಇರುವುದು ಕೆಳಗಿನ ಅಂಕಿಅಂಶದಿಂದ ತಿಳಿದುಬರುತ್ತದೆ. 2001ರಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 16, 075 ರೇಪ್ ಪ್ರಕರಣಗಳು ವರದಿಯಾಗಿದ್ದರೆ,  2013ರಲ್ಲಿ ಅದರ ಪ್ರಮಾಣ ದುಪ್ಪಟ್ಟಾಗಿದ್ದು, 33, 707 ಪ್ರಕರಣಗಳಿಗೆ ಮುಟ್ಟಿದೆ. 13 ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚು ರೇಪ್ ಪ್ರಕರಣಗಳು ನಡೆದಿರುವುದು ಮಧ್ಯಪ್ರದೇಶದಲ್ಲಿ.

ಅಲ್ಲಿ 40,422 ರೇಪ್ ಪ್ರಕರಣಗಳು ವರದಿಯಾಗಿದೆ. ಅಲ್ಲಿ ಸರಾಸರಿ 8 ರೇಪ್ ಕೇಸ್‌ಗಳು ದಾಖಲಾಗಿದೆ. ಪಶ್ಚಿಮಬಂಗಾಳದಲ್ಲಿ 13 ವರ್ಷಗಳ ಅವಧಿಯಲ್ಲಿ 22, 472 ರೇಪ್ ಕೇಸ್‌ಗಳು,ಉತ್ತರಪ್ರದೇಶದಲ್ಲಿ 22, 108 ರೇಪ್ ಕೇಸ್‌ಗಳು, ಮಹಾರಾಷ್ಟ್ರದಲ್ಲಿ 21, 049 ರೇಪ್ ಕೇಸ್‌ಗಳು ಮತ್ತು ರಾಜಸ್ಥಾನದಲ್ಲಿ 19,083 ಪ್ರಕರಣಗಳು ವರದಿಯಾಗಿದ್ದು, ಇವು ಟಾಪ್ 5 ರೇಪ್ ಕೇಸ್ ಪ್ರಕರಣಗಳ ರಾಜ್ಯಗಳಾಗಿವೆ. 

Share this Story:

Follow Webdunia kannada