Webdunia - Bharat's app for daily news and videos

Install App

25 ವರ್ಷದ ಸಲ್ಮಾನ್ ಖಾನ್ 57 ಹತ್ಯೆಗಳಲ್ಲಿ ಆರೋಪಿ

Webdunia
ಸೋಮವಾರ, 6 ಜುಲೈ 2015 (18:33 IST)
25 ವರ್ಷ ವಯಸ್ಸಿನ ಸರಣಿ ಹಂತಕನೊಬ್ಬ 57 ಜನರನ್ನು ಹತ್ಯೆ ಮಾಡಿರುವ ಹೇಯ ಘಟನೆ ವರದಿಯಾಗಿದೆ  
 
ಪೊಲೀಸರು ಆರೋಪಿ ಸಲ್ಮಾನ್ ಖಾನ್ ಸೇರಿದಂತೆ ಆತನ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆದಾಗ ಘೋರ ಸಂಗತಿ ಬಹಿರಂಗವಾಗಿದೆ.
 
25 ವರ್ಷದ ಸರಣಿ ಹಂತಕ ಸಲ್ಮಾನ್,ಬೃಹತ್ ಡಕಾಯಿತರ ಗ್ಯಾಂಗ್‌ನ ಮುಖ್ಯಸ್ಥನಾಗಿದ್ದನು. ಇಲ್ಲಿಯವರೆಗೆ 57 ಜನರನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
 
ಆರೋಪಿ ಸಲ್ಮಾನ್ ತುಂಬಾ ಕ್ರೂರಿಯಾಗಿದ್ದ ಎನ್ನಲಾಗಿದೆ. ಕೇವಲ ದರೋಡೆ ಮಾಡುವುದರಲ್ಲಿ ಅರ್ಥವಿಲ್ಲ. ಅವರನ್ನು ಹತ್ಯೆ ಮಾಡಿದಾಗ ಮಾತ್ರ ಮಜಾ ಬರುತ್ತದೆ ಎನ್ನುವ ಭಾವನೆ ಹೊಂದಿದ್ದ.ಸಲ್ಮಾನ್ ದರೋಡೆ ಮಾಡಿದ ಪ್ರತಿಯೊಂದು ಮನೆಯಲ್ಲಿ ಎಲ್ಲರನ್ನು ಹತ್ಯೆ ಮಾಡಿದ್ದಾನೆ. ನನ್ನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಮಾಹಿತಿದಾರನನ್ನು ಹತ್ಯೆ ಮಾಡದೇ ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾನಂತೆ.
 
ಸಲ್ಮಾನ್ 15 ವರ್ಷವನಾಗಿದ್ದಾಗಿನಿಂದ ಹತ್ಯೆ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಆತನ ಗ್ಯಾಂಗ್‌ನಲ್ಲಿ ಹಲವಾರು ಮಹಿಳೆಯರೂ ಇದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಸಲ್ಮಾನ್ ಖಾನ್ ಗ್ಯಾಂಗ್ ಬರೇಲಿ, ಬದೌನ್, ಫಿಲಿಬಿಟ್, ಕನ್ನೌಜ್, ಶಹಜಹಾನ್ಪುರ್, ಕಾನ್ಪುರ್ ಮತ್ತು ಹರ್ದೋಯಿ ವ್ಯಾಪ್ತಿಯಲ್ಲಿ ದರೋಡೆ ಮಾಡುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments