Select Your Language

Notifications

webdunia
webdunia
webdunia
webdunia

ಗಾಜಿಯಾಬಾದ್: 5 ತಿಂಗಳ ಅವಧಿಯಲ್ಲಿ 51 ಅತ್ಯಾಚಾರದ ಪ್ರಕರಣಗಳು ದಾಖಲು

ಗಾಜಿಯಾಬಾದ್:  5 ತಿಂಗಳ ಅವಧಿಯಲ್ಲಿ 51 ಅತ್ಯಾಚಾರದ ಪ್ರಕರಣಗಳು ದಾಖಲು
ಗಾಜಿಯಾಬಾದ್ , ಸೋಮವಾರ, 29 ಜೂನ್ 2015 (13:42 IST)
ಕೇವಲ ಐದು ತಿಂಗಳ ಅವಧಿಯೊಳಗಾಗಿ 51 ಅತ್ಯಾಚಾರದ ಪ್ರಕರಣಗಳು ಹಾಗೂ 208 ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ.
 
ಪೊಲೀಸರ ಅಂಕಿಅಂಶಗಳ ಪ್ರಕಾರ, ಜಿಲ್ಲೆಯ ವಿವಿಧ ಭಾಗಗಳಲ್ಲಿ 51 ಅತ್ಯಾಚಾರದ ಪ್ರಕರಣಗಳು ದಾಖಲಾಗಿವೆ. ಕಳೆದ ಕೆಲವು ತಿಂಗಳುಗಳಿಂದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳಲ್ಲಿ ಹೆಚ್ಚಳವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  
 
ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಹೆಚ್ಚಳವಾಗಿ 208 ಪ್ರಕರಣಗಳು ದಾಖಲಾಗಿವೆ. 12 ಸರಗಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಪೊಲೀಸ ಇಲಾಖೆ ಅನೇಕ ತಂಡಗಳನ್ನು ರಚಿಸಿದೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವವರ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಲು ಕೂಡಾ ಸರಕಾರ ಪರಿಶೀಲನೆ ನಡೆಸುತ್ತಿದೆ ಎನ್ನಲಾಗಿದೆ. 
 
ಮಹಿಳೆಯರಿಗೆ ಸುರಕ್ಷತೆ ನೀಡುವ ದೃಷ್ಟಿಯಿಂದ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ.
 

Share this Story:

Follow Webdunia kannada