ಉತ್ತರ ಪ್ರದೇಶ: ಇಲ್ಲಿನ ರಾಂಪುರ ಹಳ್ಳಿಯೊಂದರಲ್ಲಿ 532 ಮನೆ ಕೊಟ್ರೂ ಬಿಜೆಪಿಗೆ ಝೀರೋ ವೋಟು ಆಗಿರುವುದು ಅಚ್ಚರಿಗೆ ಕಾರಣವಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಹಾಕಿಕೊಂಡಿದ್ದ ಬಿಜೆಪಿಯ ಲೆಕ್ಕಚಾರ ಉಲ್ಟಾಪಲ್ಟವಾಗಿದೆ. ಇಲ್ಲಿ ಕಾಂಗ್ರೆಸ್ ನೇತೃತ್ವದ 'ಐಎನ್‌ಡಿಐಎ' ಒಕ್ಕೂಟ ಕಠಿಣ ಸವಾಲು ಒಡ್ಡಿದ ಪರಿಣಾಮ ಕಳೆದ ಬಾರಿ 80 ರಲ್ಲಿ 62 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಈ ಬಾರಿ ಕೇವಲ 35 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಇನ್ನೂ ವಿಶೇ಼ಷ ಏನೆಂದರೆ ಇಲ್ಲಿನ ರಾಂಪುರ ಹಳ್ಳಿಯೊಂದಕ್ಕೆ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿಯಲ್ಲಿ 532 ಮನೆಗಳಲ್ಲಿ ಕೊಡಲಾಗಿದೆ. ಶೇ 100ರಷ್ಟು ಮುಸ್ಲಿಂ ಮತದಾರರನ್ನು ಹೊಂದಿರುವ ಈ ಹಳ್ಳಿಯಲ್ಲಿ 2322 ಮತದಾನವಾಗಿದೆ. ಆದರೆ ಅಚ್ಚರಿ ಏನೆಂದರೆ ಬಿಜೆಪಿ ಒಂದು ಒಂದು ಮತ ಬೀಳದಿರುವುದು.
2014 ಮತ್ತು 2019ರ ಚುನಾವಣೆಯಲ್ಲಿ ಬಿಜೆಪಿ ಕ್ರಮವಾಗಿ 71 ಮತ್ತು 62 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿ ಇದೇ ಟ್ರೆಂಡ್ ಪುನರಾವರ್ತನೆಯಾಗಲಿದೆ ಎಂದು ಎಕ್ಸಿಟ್ ಪೋಲ್‌ಗಳು ಹೇಳಿದ್ದವು. ಆದರೆ ಇದೆಲ್ಲ ಈಗ ಉಲ್ಟಾ ಆಗಿದೆ.