Select Your Language

Notifications

webdunia
webdunia
webdunia
webdunia

5 ಸಾವಿರ ಕೋಟಿ ಹವಾಲಾ ಹಣ ವಶಕ್ಕೆ ಚುನಾವಣೆ ಆಯೋಗ ಸಿದ್ದತೆ

5 ಸಾವಿರ ಕೋಟಿ ಹವಾಲಾ ಹಣ ವಶಕ್ಕೆ ಚುನಾವಣೆ ಆಯೋಗ ಸಿದ್ದತೆ
ಚೆನ್ನೈ , ಭಾನುವಾರ, 30 ಮಾರ್ಚ್ 2014 (16:40 IST)
PTI
5000 ಕೋಟಿ ರೂಪಾಯಿಗಳನ್ನು ಬಂದರುಗಳ ಮೂಲಕ ಹಡಗುಗಳಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎನ್ನುವ ಮಾಹಿತಿ ಪಡೆದ ಚುನಾವಣಾ ಆಯೋಗ ಶೋಧ ಕಾರ್ಯವನ್ನು ಶೀಘ್ರಗೊಳಿಸಿ ಅನೇಕ ತಂಡಗಳನ್ನು ರಚಿಸಿದೆ ಎಂದು ಮೂಲಗಳು ತಿಳಿಸಿವೆ.

ದೆಹಲಿಯಿಂದ ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಗೆ 5 ಸಾವಿರ ಕೋಟಿ ರೂಪಾಯಿ ಹವಾಲಾ ಹಣ, ಚಿನ್ನ ಮತ್ತು ಡ್ರಗ್ಸ್ ಹಡುಗುಗಳು ಮತ್ತು ಆಯಿಲ್ ಟ್ಯಾಂಕರ್‌ಗಳ ಮೂಲಕ ಸಾಗಿಸಲಾಗುತ್ತಿದೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಪ್ರವೀಣ್ ಕುಮಾರ್ ಆದೇಶದ ಮೇರೆಗ ತುತೂಕುಡಿ ಬಂದರಿನಲ್ಲಿ ಭಾರಿ ತಪಾಸಣೆ ಆರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಲೇಷಿಯಾ, ಹಾಂಗ್‌ಕಾಂಗ್ ಮತ್ತು ಇತರ ದೇಶಗಳಿಂದ ಭಾರಿ ಪ್ರಮಾಣದಲ್ಲಿ ದುಷ್ಕರ್ಮಿಗಳು ಹಣ ಸಾಗಿಸುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಲಭಿಸಿದ್ದರಿಂದ ಶೋಧ ಕಾರ್ಯ ಮುಂದುವರಿದಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.

ಚುನಾವಣೆಯಲ್ಲಿ ಶತಾಯ ಗತಾಯ ಅಕ್ರಮ ಹಣ ಬಳಕೆಗೆ ಕಡಿವಾಣ ಹಾಕಬೇಕು ಎನ್ನುವ ಉದ್ದೇಶದಿಂದ ಚುನಾವಣೆ ಆಯೋಗ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

Share this Story:

Follow Webdunia kannada