Select Your Language

Notifications

webdunia
webdunia
webdunia
webdunia

ಮಲಮಗಳ ಮೇಲೆ ಅತ್ಯಾಚಾರವೆಸಗಿದ ಪಾಪಿ ತಂದೆಗೆ 6 ವರ್ಷ ಜೈಲು ಶಿಕ್ಷೆ

ಮಲಮಗಳ ಮೇಲೆ ಅತ್ಯಾಚಾರವೆಸಗಿದ ಪಾಪಿ ತಂದೆಗೆ 6 ವರ್ಷ ಜೈಲು ಶಿಕ್ಷೆ
ಮುಂಬೈ , ಬುಧವಾರ, 1 ಅಕ್ಟೋಬರ್ 2014 (17:26 IST)
ಮಲಮಗಳ ಮೇಲೆ ಲೈಂಗಿಕ  ಶೋಷಣೆ ಮಾಡಿದ 45 ವರ್ಷದ ವ್ಯಕ್ತಿಯೊಬ್ಬನಿಗೆ ಮುಂಬೈನ ಸೆಷನ್ಸ್ ಕೋರ್ಟ್ 6 ವರ್ಷ ಕಾರಾಗೃಹವಾಸದ ಶಿಕ್ಷೆಯನ್ನು ನೀಡಿದೆ. 

ಪ್ರಸಕ್ತ ವರ್ಷದ ಜನವರಿ ಮತ್ತು ಮಾರ್ಚ್ ತಿಂಗಳ ನಡುವೆ ಆರೋಪಿ ಈ ಕೃತ್ಯವನ್ನೆಸಗಿದ್ದಾನೆ .ಪೀಡಿತಳ ತಂದೆಯ ಮರಣಾ ನಂತರ, ಆಕೆಯ ತಾಯಿ ಆರೋಪಿಯ ಜತೆ ಮರು ವಿವಾಹವಾದ ನಂತರ ಕುಟುಂಬ ಪಶ್ಚಿಮ ಮುಂಬೈನ ಮಾಹಿಮ್‌ಗೆ ವಾಸ್ತವ್ಯ ಬದಲಿಸಿತು. 
 
ಮಾರ್ಚ್‌ನಲ್ಲಿ ಮಲತಂದೆಯಿಂದ ಲೈಂಗಿಕವಾಗಿ ಆಕ್ರಮಣಕ್ಕೊಳಗಾದ ಸಂದರ್ಭದಲ್ಲಿ ಹುಡುಗಿ ಕೂಗಿಕೊಂಡಾಗ ಘಟನೆ ಬೆಳಕಿಗೆ ಬಂದಿತು.
 
ಘಟನೆಯನ್ನು ತಾಯಿಯ ಬಳಿ ಹೇಳಿಕೊಂಡಾಗ ಆಕೆ ಗಂಡನ ಬಳಿ ಈ ಕುರಿತು ಜಗಳವಾಡಿದ್ದಳು. ಆದರು ಕೂಡ ಹುಡುಗಿಗೆ ಲೈಂಗಿಕ ಹಿಂಸೆ ನೀಡುವುದನ್ನಾತ ಮುಂದುವರೆಸಿದ್ದ. 
 
ಹುಡುಗಿಯ ತಾಯಿ ಕ್ಷಯರೋಗ ಪೀಡಿತಳಾಗಿ ಫೆಬ್ರವರಿ ತಿಂಗಳಲ್ಲಿ ಮರಣವನ್ನಪ್ಪಿದ ನಂತರ ಆತ ತನ್ನ ದುಷ್ಕೃತ್ಯವನ್ನು ಮುಂದುವರೆಸಿದ್ದ. 
 
ಈ ವಿಷಯ ಪೀಡಿತಳ ತಾಯಿಯ ಸಹೋದರಿಯ ಗಮನಕ್ಕೆ ಬಂದಾಗ ಆಕೆ ಪೋಲಿಸರಲ್ಲಿ ದೂರು ದಾಖಲಿಸಿದಳು. ಆರೋಪಿಯ ಮೇಲೆ ಲೈಂಗಿಕ ಅಪರಾಧಗಳಿಂದ ಮಕ್ಕಳ ಹಿತರಕ್ಷಣಾ ಕಾಯಿದೆಯಡಿ ಪ್ರಕರಣ ದಾಖಲಾಯಿತು.
 
ವಿಚಾರಣೆ ಸಂದರ್ಭದಲ್ಲಿ ಹಲವಾರು ಸಾಕ್ಷಿಗಳನ್ನು ಪರೀಕ್ಷಿಸಿದ ನ್ಯಾಯಾಧೀಶರು ಆರೋಪಿಗೆ 6 ವರ್ಷಗಳ ಸಜೆಯನ್ನು ವಿಧಿಸಿದರು. 

Share this Story:

Follow Webdunia kannada