Select Your Language

Notifications

webdunia
webdunia
webdunia
webdunia

ಪತಿ, ಪುತ್ರನನ್ನು ಕಟ್ಟಿ ಹಾಕಿ ದಲಿತ ಮಹಿಳೆಯ ಮೇಲೆ 10 ಜನರಿಂದ ಗ್ಯಾಂಗ್ ರೇಪ್

ಪತಿ, ಪುತ್ರನನ್ನು ಕಟ್ಟಿ ಹಾಕಿ ದಲಿತ ಮಹಿಳೆಯ ಮೇಲೆ 10 ಜನರಿಂದ ಗ್ಯಾಂಗ್ ರೇಪ್
ಬರೇಲಿ , ಶುಕ್ರವಾರ, 22 ಆಗಸ್ಟ್ 2014 (18:53 IST)
40 ವರ್ಷದ ದಲಿತ ಮಹಿಳೆಯೊಬ್ಬಳ ಗಂಡ ಮತ್ತು ಮಗನ ಮೇಲೆ ಹಲ್ಲೆ ನಡೆಸಿ ಆಕೆಯ ಮೇಲೆ ಬರೊಬ್ಬರಿ 10 ಜನ ಕೀಚಕರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಕಂಟೋನ್ಮೆಂಟ್ ಪ್ರದೇಶದಲ್ಲಿ  ವರದಿಯಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ. 

ದಂಪತಿ ಮತ್ತು ಮಗ ಮೂವರು ಬುಧವಾರ ರಾತ್ರಿ ಸಮಯದಲ್ಲಿ ತಮ್ಮ ಹೊಲದ ಕೆಲಸ ಮುಗಿಸಿಕೊಂಡು ಕಾಡಿನ ದಾರಿಯಲ್ಲಿ ಮನೆಗೆ ಹಿಂತಿರುಗುತ್ತಿದ್ದ ಸಮಯದಲ್ಲಿ  ಅಲ್ಲಿ ಅವಿತಿದ್ದ 10 ಜನ ಯುವಕರು ಅವರ ಮೇಲೆ ದಾಳಿ ನಡೆಸಿದರಲ್ಲದೇ, ಮಹಿಳೆಯ ಗಂಡ ಮತ್ತು ಮಗನ ಮೇಲೆ ಹಲ್ಲೆ ನಡೆಸಿ ಅವರಿಬ್ಬರನ್ನು ಕಟ್ಟಿ ಹಾಕಿ  ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದರು. 
 
 ಪ್ರತಿರೋಧ ತೋರಿದ ಪೀಡಿತಳ ಕುಟುಂಬದ ಸದಸ್ಯರ ಮೇಲೆ ದುಷ್ಕರ್ಮಿಗಳು ಹಲ್ಲೆ ಕೂಡ ನಡೆಸಿದರು ಎಂದು ಪೋಲಿಸರು ತಿಳಿಸಿದ್ದಾರೆ.  ವೈದ್ಯಕೀಯ ವರದಿ ಆಕೆ ಮೇಲೆ ಅತ್ಯಾಚಾರ ನಡೆದಿರುವುದನ್ನು ಸಾಬೀತು ಪಡಿಸಿದೆ. ಆರೋಪಿಗಳೆಲ್ಲರ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು  ಹಿರಿಯ ಪೋಲಿಸ್ ವರಿಷ್ಠಾಧಿಕಾರಿ ಜೆ ರವೀಂದ್ರ ಗೌದ್ ತಿಳಿಸಿದ್ದಾರೆ. 

Share this Story:

Follow Webdunia kannada