Select Your Language

Notifications

webdunia
webdunia
webdunia
webdunia

ಮುಂಬೈನಲ್ಲಿ ಕಾಮೋದ್ರೇಕ ಗಿಡಮೂಲಿಕೆ ಜಾಲ ಪತ್ತೆ: 33000 ಕೆ.ಜಿ ಗಿಡಮೂಲಿಕೆ ವಶ

ಮುಂಬೈನಲ್ಲಿ ಕಾಮೋದ್ರೇಕ ಗಿಡಮೂಲಿಕೆ ಜಾಲ ಪತ್ತೆ: 33000 ಕೆ.ಜಿ ಗಿಡಮೂಲಿಕೆ ವಶ
ಮುಂಬೈ , ಶುಕ್ರವಾರ, 16 ಜೂನ್ 2017 (12:04 IST)
ಕಾಮೋದ್ರೇಕವಾಗಿ ಬಳಸಲಾಗುತ್ತೆ ಎನ್ನಲಾಗುವ ಕೋಟ್ಯಂತರ ರೂಪಾಯಿ ಮೌಲ್ಯದ 33,000 ಕೆ.ಜಿ ಗಿಡಮೂಲಿಕೆಯನ್ನ ಮುಂಬೈ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆದಿದೆ.
 

ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ್, ಹಿಮಾಚಲಪ್ರದೇಶ ಮತ್ತು ಚೀನಾ, ಪಾಕಿಸ್ತಾನದ ಕೆಲವೆಡೆ ಮಾತ್ರ ಸ್ವಾಭಾವಿಕವಾಗಿ ಬೆಳೆಯುವ ಈ ಗಿಡ ಮೂಲಿಕೆಯನ್ನ ಸೌಸ್ಸುರಿಯಾ ಕಾಕ್ಟಸ್ ಅಥವಾ ಕುತ್ ಎಂದು ಕರೆಯಲಾಗುತ್ತೆ. ಹಿಮಾಲಯ ಪರ್ವತದ ಸಮುದ್ರ ಮಟ್ಟದಿಂದ 8000ರಿಂದ 12000 ಅಡಿ ಎತ್ತರದ ಶೀತ ಪ್ರದೇಶದಲ್ಲಿ ಮಾತ್ರ ಈ ಗಿಡಮೂಲಿಕೆ ಬೆಳೆಯುತ್ತೆ. ಭಾರತ ಸರ್ಕಾರ ಈ ಗಿಡಮೂಲಿಕೆಯನ್ನ ಅಳಿವಿನಂಚಿನಲ್ಲಿರುವ ಸಸ್ಯ ಪ್ರಭೇದವೆಂದು ಘೋಷಿಸಿದೆ.

ಕಾಮೋದ್ರೇಕದ ಜೊತೆ ಅಸ್ತಮಾ, ಸಂಧಿವಾತ, .ಆಯುರ್ವೇದ, ಸುಗಂಧ ದ್ರವ್ಯ ಮುಂತಾದ ಉತ್ಪನ್ನಗಳಿಗೆ ಬಳಸಲಾಗುತ್ತೆ. ನವದೆಹಲಿ, ಅಮೃತಸರದ ಉದ್ಯಮಿಗಳು ಚೀನಾದಿಂದ ಈ ಅಮೂಲ್ಯ ಗಿಡಮೂಲಿಕೆಯನ್ನ ಆಮದು ಮಾಡಿದ್ದರು ಎಂದು ತಿಳಿದುಬಂದಿದೆ. ಪುಷ್ಪಕಮೂಲ ಎಂಬ ಹೆಸರಿನಲ್ಲಿ ಅಮೃತಸರದಲ್ಲಿ ಇದನ್ನ ಮಾರಲಾಗುತ್ತೆ ಎಂಬ ಮಾಹಿತಿ ಇದೆ. ಈ ಕಂತುಗಳಲ್ಲಿ ಈ ಗಿಡಮೂಲಿಕೆಯನ್ನ ಸಮುದ್ರ ಮಾರ್ಗದ ಮೂಲದ ತರಿಸಿಕೊಳ್ಲಲಾಗಿದೆ. ಗಿಡಮೂಲಿಕೆಯ ಸ್ಯಾಂಪಲನ್ನ ಪ್ರಯೋಗಾಲಯಕ್ಕೆ ಕಳುಹಿಸಿರುವ ಪೊಲೀಸರು, ಇದರ ಹಿಂದಿರುವ ಉದ್ಯಮಿಗಳ ಬೇಟೆಗೆ ಬಲೆ ಬೀಸಿದ್ದಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಸ್ಎನ್ಎಲ್ ನಿಂದ ಬಂಪರ್ ಆಫರ್!