Select Your Language

Notifications

webdunia
webdunia
webdunia
webdunia

ಗುರಗಾಂವ್‌ನ ಹೋಟೆಲ್‌ನಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ

ಗುರಗಾಂವ್‌ನ ಹೋಟೆಲ್‌ನಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ
ಗುರಗಾಂವ್ , ಮಂಗಳವಾರ, 22 ಏಪ್ರಿಲ್ 2014 (19:03 IST)
30 ವರ್ಷ ವಯಸ್ಸಿನ ದೆಹಲಿ ಮೂಲದ ಮಹಿಳೆಯೊಬ್ಬಳು ತನ್ನ ಸಹೋದ್ಯೋಗಿಯನ್ನು ಒಳಗೊಂಡಂತೆ ಇಬ್ಬರು ಪುರುಷರಿಂದ ಸಾಮೂಹಿಕವಾಗಿ ಅತ್ಯಾಚಾರಕ್ಕೊಳಗಾದ ಘಟನೆ ಗುರಗಾಂವ್‌ನ ಹೋಟೆಲೊಂದರಲ್ಲಿ ನಡೆದಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.  
 
ರೋಹಿನಿಯ ನಿವಾಸಿಯಾಗಿರುವ ಮಹಿಳೆ ಗುರಗಾಂವ್‌ನ ಮಲ್ಟಿ ಸ್ವೇಷಾಲಿಟಿ ಆಸ್ಪತ್ರೆ ಒಂದರಲ್ಲಿ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿದ್ದು ಆಪಾದಿತರು ಆಕೆಯ ಮಗನಿಗೆ ಪ್ರಸಿದ್ಧ ಶಾಲೆಯೊಂದರಲ್ಲಿ ಸೀಟು ಕೊಡಿಸುವುದಾಗಿ ಭರವಸೆ ನೀಡಿ, ಆ ಕುರಿತು ಮಾತನಾಡಲು ಮಧ್ಯಾಹ್ನದ ಊಟಕ್ಕೆ ಹೋಟೆಲ್ ಒಂದಕ್ಕೆ ಬರುವಂತೆ ಆಹ್ವಾನಿಸಿದ್ದರು. 
ವಂಚಕರನ್ನು ಮನೀಷ ಕಪುರ್ ಮತ್ತು ಕಮಲ್ ಎಂದು ಗುರುತಿಸಲಾಗಿದ್ದು, ಕಪುರ್ ಕೂಡ ಅದೇ ಆಸ್ಪತ್ರೆಯಲ್ಲಿ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ. 
 
ಮಹಿಳೆಯ ಮಗನಿಗೆ ದೆಹಲಿಯ ಪ್ರತಿಷ್ಠಿತ ಶಾಲೆಯೊಂದರಲ್ಲಿ ಸೀಟು ಕೊಡಿಸುತ್ತೇನೆ, ಆ ವಿಷಯದಲ್ಲಿ ನನ್ನ ಸ್ನೇಹಿತನನ್ನು ಭೇಟಿಯಾಗೋಣ ಎಂದು ಕರೆದಿದ್ದ ಆತ ತನ್ನ ಸ್ನೇಹಿತನನ್ನು ಪ್ರಭಾವ ಬಳಸಿ ಶಾಲೆಯಲ್ಲಿ ಮಗುವನ್ನು ಭರ್ತಿ ಮಾಡಿಸೋಣ ಎಂದಿದ್ದ. 
 
ಆಕೆಗೆ ತಿಳಿಸದಂತೆ ಆತ ಹೊಟೆಲ್‌ನಲ್ಲಿ ರೂಮ್ ಒಂದನ್ನು ಬುಕ್ ಮಾಡಿಸಿದ್ದ. 
 
ಕಪೂರ್ ಊಟದ ನಂತರ ಶಾಲಾ ದಾಖಲಾತಿಯ ಬಗ್ಗೆ ಚರ್ಚಿಸಲು ಆಕೆಯನ್ನು ಕೋಣೆಗೆ ಕರೆದೊಯ್ದ ಎಂದು ತನಿಖಾಧಿಕಾರಿ ಅಶೋಕ್ ಕುಮಾರ್ ತಿಳಿಸಿದ್ದಾರೆ. 
 
ಆಕೆ ಹೋಟೆಲ್ ಕೋಣೆಗೆ ಬಂದಾಗ, ಅವಳಿಗೆ ತಂಪು ಪಾನೀಯ ನೀಡಿ ಪ್ರಜ್ಞೆ ತಪ್ಪುವಂತೆ ಮಾಡಿ ಆಕೆಯ ಮೋಲೆ ಇಬ್ಬರು ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದು ಬಂದಿದೆ. 
 
"ಅದೇ ದಿನ ಆಕೆ ಅವರಿಬ್ಬರ ಮೇಲೆ ರೋಹಿನಿ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾಳೆ. ಅವರಿಬ್ಬರನ್ನು ವಶಕ್ಕೆ ತೆಗೆದು ಕೊಳ್ಳಲಾಗಿದೆ" ಎಂದು ಅಶೋಕ್ ಕುಮಾರ್ ತಿಳಿಸಿದ್ದಾರೆ. 
 

Share this Story:

Follow Webdunia kannada