Webdunia - Bharat's app for daily news and videos

Install App

ಹುತಾತ್ಮ ಸೈನಿಕರ ತವರಿನಲ್ಲಿ ಮುಗಿಲು ಮುಟ್ಟಿದ ಶೋಕ

Webdunia
ಸೋಮವಾರ, 19 ಸೆಪ್ಟಂಬರ್ 2016 (16:23 IST)
ಉತ್ತರ ಕಾಶ್ಮೀರದ ಉರಿ ಪಟ್ಟಣದ ಬಳಿಯಿರುವ ಸೇನಾ ಕಚೇರಿ ಮೇಲೆ ಭಾನುವಾರ ಉಗ್ರರು ನಡೆಸಿದ ದಾಳಿಯಲ್ಲಿ ಮೃತರಾದ 17 ಸೈನಿಕರಲ್ಲಿ ಮೂವರು ಬಿಹಾರದವರಾಗಿದ್ದಾರೆ. 
ಈ ಮೂವರ ಪಾರ್ಥಿವ ಶರೀರಗಳನ್ನು ತವರಿಗೆ ರವಾನಿಸಲಾಗಿದ್ದು ಇಂದು ಸಂಜೆಯೊಳಗೆ ಅವರ ಅಂತಿಮ ಸಂಸ್ಕಾರ ಮಾಡುವ ಸಾಧ್ಯತೆಗಳಿವೆ. 
 
ಮೃತರನ್ನು ಸೆಪೊಯ್ ರಾಕೇಶ್ ಸಿಂಗ್ ( ಕೈಮುರ್ ಜಿಲ್ಲೆ ಬಡ್ಡ್ಜಾ ಗ್ರಾಮ) , ನಾಯ್ಕ್ ಎಸ್‌ಕೆ ವಿದ್ಯಾರ್ಥಿ ( ಗಯಾ ಜಿಲ್ಲೆ ಬೊಕನಾರಿ ಗ್ರಾಮ) ಮತ್ತು ಭೋಜ್ಪುರ ಜಿಲ್ಲೆಯ ರಕ್ತು ಗ್ರಾಮದ ಹವಿಲ್ದಾರ್ ಅಶೋಕ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ. 
 
ಇತ್ತೀಚಿನ ವರ್ಷಗಳಲ್ಲಿ ಕಂಡ ಅತ್ಯಂತ ಘೋರ ದಾಳಿ ಎನ್ನಿಸಿಕೊಂಡಿರುವ ಈ ದುರ್ಘಟನೆಯ ಸುದ್ದಿ ಹಬ್ಬುತ್ತಿದ್ದಂತೆ ಬಿಹಾರದ ಈ ಮೂರು ಹಳ್ಳಿಗಳಲ್ಲಿ ರೋಧನ ಮುಗಿಲು ಮುಟ್ಟಿದೆ. 
 
ವಿದ್ಯಾರ್ಥಿ ತಂದೆ ಮಥುರಾ ಯಾದವ್ ಮತ್ತು ತಾಯಿ ಕುಂತಿ ದೇವಿ ಶೋಕ ಕಲ್ಲು ಹೃದಯವನ್ನು ಸಹ ಕಲಕುವಂತಿದೆ. ಅಶೋಕ್ ಕುಮಾರ್, ರಾಕೇಶ್ ಮನೆಯ ಕಥೆಯೂ ಅಷ್ಟೇ. ಆತನ ಸ್ನೇಹಿತರು, ಸಂಬಂಧಿಕರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.
 
ನಿನ್ನೆ ಕಾಶ್ಮೀರದ ಉರಿ ಪಟ್ಟಣದಲ್ಲಿ ನಡೆದ ದಾಳಿಯಲ್ಲಿ 17 ಯೋಧರು ಮತ್ತು ನಾಲ್ವರು ಉಗ್ರರು ಹತರಾಗಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಇಂದು ಮತ್ತೆ ಮೂವರು ಹುತಾತ್ಮರಾಗಿದ್ದಾರೆ. ಸೇನಾ ಕಚೇರಿಯೊಳಗೆ ಮತ್ತೆ ಮೂವರು ಉಗ್ರರು ಇರಬಹುದೆಂದು ಭಾವಿಸಲಾಗಿದ್ದು ಕಾರ್ಯಾಚರಣೆ ಮುಂದುವರೆದಿದೆ. 

ಗಾಯಗೊಂಡ ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments