ಮಳೆಗಾಲ ಶುರುವಾಗಿದೆ. ಪ್ರವಾಸ ಪ್ರಿಯರು ಪ್ರಕೃತಿ ಸೌಂದರ್ಯವನ್ನು ಆನಂದಿಸಲು ಉತ್ತಮ ಪ್ರವಾಸಿ ತಾಣಗಳನ್ನು ಹುಡುಕುವ ಸಮಯ ಬಂದಂತಾಗಿದೆ. ಈ ಮೂರು ಪ್ರಮುಖ ಸ್ಥಳಗಳ ವಿವರವನ್ನು ಪಡೆದುಕೊಂಡು ನಿಮ್ಮ ಪ್ರವಾಸವನ್ನು ಇಂದೇ ಆರಂಭಿಸಿ.
ಶೋಜಾ, ಹಿಮಾಚಲ ಪ್ರದೇಶ
ಹಿಮಾಚಲ ಪ್ರದೇಶದ ಕಣಿವೆಗಳಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಅದ್ಭುತ ತಾಣ ಶೋಜಾ. ಈ ಪ್ರದೇಶ ಸಂಪೂರ್ಣವಾಗಿ ಅಭಿವೃದ್ಧಿ ಹೊಂದದಿದ್ದರು ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪ್ರವಾಸಿಗರು ಜನಸಂದಣಿಯಿಂದ ತಪ್ಪಿಸಿಕೊಂಡು ಈ ಪ್ರದೇಶಕ್ಕೆ ಭೇಟಿ ನೀಡಿ ಪ್ರಕೃತಿ ಸೌಂದರ್ಯವನ್ನು ಸವಿಯಬಹುದಾಗಿದೆ.
ದೇವಪ್ರಯಾಗ, ಉತ್ತರಾಖಂಡ್
ಉತ್ತರಾಖಂಡ್ ರಾಜ್ಯದ ಅಲಕನಂದಾ ಮತ್ತು ಭಾಗೀರಥಿ ನದಿತೀರದಲ್ಲಿರುವ ದೇವಪ್ರಯಾಗವೆಂಬ ಗ್ರಾಮ, ತನ್ನ ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದೆ. ಈ ಗ್ರಾಮ ಆಧ್ಯಾತ್ಮ, ಸಂಪ್ರದಾಯ ಮತ್ತು ಪ್ರಾಚೀನ ಇತಿಹಾಸದ ತವರೂರಾಗಿದೆ. ಮುಂಗಾರು ಮಳೆ ತೀವ್ರವಾಗಿ ಸುರಿಯುವ ಹಿನ್ನೆಲೆಯಲ್ಲಿ ಈ ಗ್ರಾಮವನ್ನು ಎತ್ತರದಲ್ಲಿ ನಿರ್ಮಿಸಲಾಗಿದೆ. ಪ್ರವಾಸಿಗರು ಒಮ್ಮೆಯಾದರೂ ಈ ಪ್ರದೇಶಕ್ಕೆ ಭೇಟಿ ನೀಡಿ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಬೇಕಾಗಿದೆ.
ಓರ್ಚ್ಛಾ, ಮಧ್ಯಪ್ರದೇಶ
16 ನೇಯ ಶತಮಾನದಲ್ಲಿ ರಾಜಾ ರುದ್ರ ಪ್ರತಾಪ್ ಅವರು ಸ್ಥಾಪಿಸಿರುವ ಪುಟ್ಟ ಗ್ರಾಮ ಓರ್ಚ್ಛಾ. ಈ ಪ್ರದೇಶದಲ್ಲಿ ರಾಜಾ ರುದ್ರ ಪ್ರತಾಪ್ ಅವರು ನಿರ್ಮಿಸಿರುವ ದೇವಾಲಯ ಮತ್ತು ಕೋಟೆಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಮಳೆಗಾಲದಲ್ಲಿ ಮೈ ತುಂಬಿ ಹರಿಯುವ ನದಿಗಳು ಮತ್ತು ವನ್ಯಮೃಗಗಳ ನೆಲೆಗಳು ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿವೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.