Webdunia - Bharat's app for daily news and videos

Install App

3 ಸಾವಿರ ಕೋಟಿ ಆಸ್ತಿಯ ಒಡೆಯ ಬಿಜೆಪಿಯ ರಾಜ್ಯಸಭೆ ಅಭ್ಯರ್ಥಿ

Webdunia
ಬುಧವಾರ, 29 ಜನವರಿ 2014 (14:07 IST)
PTI
ಸಾವಿರಾರು ಕೋಟಿ ಆಸ್ತಿಯನ್ನು ಹೊಂದಿರುವ ಉದ್ಯಮಿಯೊಬ್ಬರು ಬಿಜೆಪಿಯ ರಾಜ್ಯಸಭೆ ಅಭ್ಯರ್ಥಿಯಾಗಿದ್ದು ರಾಜ್ಯಸಭೆಯನ್ನು ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

ಸೆಕ್ಯೂರಿಟಿ ಆಂಡ್ ಇಂಟಲಿಜೆನ್ಸ್ ಸರ್ವಿಸಸ್ ಇಂಡಿಯಾ(ಎಸ್‌ಐಎಸ್) ಎನ್ನುವ ಕಂಪೆನಿಯ ಮಾಲೀಕರಾದ ರವೀಂದ್ರ ಕಿಶೋರ್ ಸಿನ್ಹಾ, ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳಿದ್ದು ಫೆಬ್ರವರಿ 7 ರಂದು ಫಲಿತಾಂಶ ಘೋಷಣೆಯಾಗಲಿದೆ.

243 ಸದಸ್ಯರನ್ನು ಹೊಂದಿರುವ ಬಿಹಾರ್ ವಿಧಾನಸಭೆಯಲ್ಲಿ ಬಿಜೆಪಿ 91 ಸದಸ್ಯ ಬಲವನ್ನು ಹೊಂದಿದೆ. ಎರಡು ರಾಜ್ಯಸಭೆ ಸ್ಥಾನಗಳನ್ನು ಗೆಲ್ಲಬೇಕಾದಲ್ಲಿ 82 ಮತಗಳ ಅಗತ್ಯವಿದೆ. ಸಿನ್ಹಾ ಮತ್ತು ಮಾಜಿ ಕೇಂದ್ರ ಸಚಿವ ಸಿ.ಪಿ.ಠಾಕೂರ್ ಕಣದಲ್ಲಿದ್ದಾರೆ.

ರವೀಂದ್ರ ಕಿಶೋರ್ ಸಿನ್ಹಾ ಮತ್ತೊಬ್ಬ ಅಭ್ಯರ್ಥಿ ಠಾಕೂರ್ ಅವರೊಂದಿಗೆ ಬಿಜೆಪಿ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ಪತ್ನಿಯ ಆಸ್ತಿ 1030 ಕೋಟಿ ರೂಪಾಯಿಗಳಾಗಿದ್ದು, ತಮ್ಮ ಆಸ್ತಿ 564 ಕೋಟಿ ರೂಪಾಯಿಗಳಾಗಿದೆ ಎಂದು ಚುನಾವಣೆ ನಾಮಪತ್ರದಲ್ಲಿ ಘೋಷಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments