Select Your Language

Notifications

webdunia
webdunia
webdunia
webdunia

28 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆಮಾಡಿದ ಆರೋಪಿಗಳು

28 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆಮಾಡಿದ ಆರೋಪಿಗಳು
ಬದೌನ್(ಉತ್ತರಪ್ರದೇಶ) , ಮಂಗಳವಾರ, 4 ಆಗಸ್ಟ್ 2015 (17:56 IST)
28 ವರ್ಷದ ಮಹಿಳೆಯ ಮೇಲೆ ಕೆಲ ಅಪರಿಚಿತ ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರವೆಸಗಿ ನಂತರ ಆಕೆಯನ್ನು ಹತ್ಯೆ ಮಾಡಿದ ಹೇಯ ಘಟನೆ ಫೈಜ್‌ಗಂಜ್‌ನ ಬೆಹ್ತಾ ಪ್ರದೇಶದಿಂದ ವರದಿಯಾಗಿದೆ. 
 
ಮನ್ನು ನಗರ್ ಗ್ರಾಮದ ಕಬ್ಬಿನ ಹೊಲದಲ್ಲಿ ಮಹಿಳೆಯ ಶವ ಪತ್ತೆಯಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಬಲೆಂದು ಭೂಷಣ್ ಸಿಂಗ್ ತಿಳಿಸಿದ್ದಾರೆ. 
 
ಮೃತ ಮಹಿಳೆಯ ಕೈ ಮತ್ತು ಕಾಲುಗಳನ್ನು ಕಟ್ಟಿಹಾಕಲಾಗಿದ್ದು ಆಕೆಯ ದೇಹದ ಮೇಲೆ ಗಂಬೀರ ಗಾಯಗಳಾಗಿವೆ. ಆರಂಭಿಕ ತನಿಖೆಯ ಪ್ರಕಾರ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ನಂತರ ಹತ್ಯೆ ಮಾಡಲಾಗಿದೆ ಎಂದು ಭೂಷಣ್ ಸಿಂಗ್ ಮಾಹಿತಿ ನೀಡಿದ್ದಾರೆ. 
 
ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲವಾದರೂ ಅಪರಿಚಿತ ಆರೋಪಿಗಳ ವಿರುದ್ಧ ರೇಪ್ ಮತ್ತು ಹತ್ಯಾ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

Share this Story:

Follow Webdunia kannada