26 ವರ್ಷದ ಯುವತಿಯ ಮೇಲೆ ಇಬ್ಬರು ಯುವಕರು ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣ ಉತ್ತರ ಪ್ರದೇಶದ ಮುಜಪ್ಫರ್ ನಗರದ ಖಟೋಲಿಯಲ್ಲಿ ನಡೆದಿದೆ.
ಎಲ್ಎಲ್ಬಿ ವಿದ್ಯಾರ್ಥಿನಿಯಾಗಿರುವ ಪೀಡಿತೆ ಹಣಕಾಸಿನ ವಿಚಾರದಲ್ಲಿ ಆರೋಪಿಯಲ್ಲಿ ಒಬ್ಬನನ್ನು ಭೇಟಿಯಾಗಲು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಆರೋಪಿಗಳನ್ನು ವೇಭವ್ ಮತ್ತು ಆಶುತೋಷ್ ಎಂದು ಗುರುತಿಸಲಾಗಿದ್ದು ಪೀಡಿತೆ ನೀಡಿದ ದೂರಿನನ್ವಯ ಅವರಿಬ್ಬರನ್ನು ಬಂಧಿಸಲಾಗಿದೆ ಎಂದು ಪೋಲಿಸ್ ಅಧಿಕಾರಿ ಡಿ ಕೆ ಮಿತ್ತಲ್ ತಿಳಿಸಿದ್ದಾರೆ.
ಪೀಡಿತಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಿತ್ತಲ್ ಹೇಳಿದ್ದಾರೆ.