Select Your Language

Notifications

webdunia
webdunia
webdunia
webdunia

ಆತ್ಮಹತ್ಯೆಗೆ ಶರಣಾದ ಮಾಜಿ ಮಾಡೆಲ್ ಅರ್ಚನಾ ಪಾಂಡೆ

ಆತ್ಮಹತ್ಯೆಗೆ ಶರಣಾದ ಮಾಜಿ ಮಾಡೆಲ್ ಅರ್ಚನಾ ಪಾಂಡೆ
ಮುಂಬೈ , ಮಂಗಳವಾರ, 30 ಸೆಪ್ಟಂಬರ್ 2014 (09:41 IST)
26 ವರ್ಷದ ಮಾಡೆಲ್ ಪರಿವರ್ತಿತ ಆರ್ಥಿಕ ಸಲಹಾಗಾರ್ತಿ ಅರ್ಚನಾ ಪಾಂಡೆ ವೆರ್ಸೋವಾದಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ. 

ಆಕೆ ಎರಡು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಆದರೆ ಈ ಬಗ್ಗೆ ಯಾರಿಗೂ ತಿಳಿದು ಬಂದಿಲ್ಲ. ಸೋಮವಾರ ಬೆಳಿಗ್ಗೆ  ಆಕೆಯ ಮನೆಯ ಒಳಗಿಂದ ದುರ್ನಾತ ಬರುತ್ತಿರುವದನ್ನು ಗಮನಿಯಿದ ನೆರೆಹೊರೆಯವರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. 
 
ಡೆತ್ ನೋಟ್‌ನ್ನು ಬರೆದಿಟ್ಟಿರುವ ಆಕೆ ತನ್ನ ಈ ನಿರ್ಧಾರಕ್ಕೆ ತನ್ನ ಪ್ರಿಯಕರ ಒಮರ್ ಪಠಾಣ್ ಕಾರಣ ಎಂದು ಆರೋಪಿಸಿದ್ದು, ಆತನ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕೆಂದು  ಮನವಿ ಮಾಡಿಕೊಂಡಿದ್ದಾಳೆ.  
 
ಆರೋಪಿಯ ಮೇಲೆ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣವನ್ನು ದಾಖಲಿಸಿಕೊಂಡಿರುವ ವೆರ್ಸೋವಾ ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ. 
 
ಸಂಗ್ರಹಿಸಿರುವ ಮಾಹಿತಿಯನ್ನು ನಾವು ಪರಿಶೀಲಿಸುತ್ತಿದ್ದೇವೆ. ಅದರ ಆಧಾರದ ಮೇಲೆ ಅವಶ್ಯಕ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು  ವಲಯ -9ರ ಪೊಲೀಸ್ ಉಪ ಆಯುಕ್ತರಾದ ಸತ್ಯ ನಾರಾಯಣ್ ಚೌಧರಿ ತಿಳಿಸಿದ್ದಾರೆ. 
 
ವೆರ್ಸೋವಾದ ನ್ಯೂ ಮಹಾದೇವ್ ಕಾಲೋನಿಯ ಶುಭಂ ಕರೋಟಿ ಕಟ್ಟಡದ 12ನೇ ಮಹಡಿಯಲ್ಲಿ ವಾಸಿಸುತ್ತಿದ್ದ ಪಾಂಡೆ ಕಳೆದರೆಡು ದಿನಗಳ ಹಿಂದೆ ನೇಣು ಬಿಗಿದುಕೊಂಡು ಜೀವ ತ್ಯಜಿಸಿದ್ದಾಳೆ. ಕೊಳೆತ ಸ್ಥಿತಿಯಲ್ಲಿದ್ದ ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೋಲಿಸರು ಹೇಳಿದ್ದಾರೆ. 

Share this Story:

Follow Webdunia kannada