Select Your Language

Notifications

webdunia
webdunia
webdunia
webdunia

26/11: ಲಕ್ವಿ, ಶಾ ತಪ್ಪೊಪ್ಪಿದ್ದಾರೆ- ಪಾಕ್ ಮಾಧ್ಯಮ

26/11: ಲಕ್ವಿ, ಶಾ ತಪ್ಪೊಪ್ಪಿದ್ದಾರೆ- ಪಾಕ್ ಮಾಧ್ಯಮ
ನವದೆಹಲಿ , ಶನಿವಾರ, 1 ಆಗಸ್ಟ್ 2009 (14:36 IST)
WD
ಕಳೆದ ನವೆಂಬರ್ ತಿಂಗಳಲ್ಲಿ ಮುಂಬೈಯಲ್ಲಿ ದಾಳಿ ನಡೆಸಿದ ರೂವಾರಿಗಳನ್ನು ನ್ಯಾಯಾಲಯದ ಕಟಕಟೆಗೆ ತರುವ ಪಾಕಿಸ್ತಾನದ ಬದ್ಧತೆಗೆ ಪೂರಕವೆಂಬಂತೆ, ಲಷ್ಕರ್-ಇ-ತೋಯ್ಬಾದ ಪ್ರಮುಖ ಕಾರ್ಯಕರ್ತರಾದ ಜಾಕಿರ್ ಉರ್ ರೆಹ್ಮಾನ್ ಲಕ್ವಿ ಹಾಗೂ ಜರಾರಾ ಶಾ ಅವರುಗಳು ತಪ್ಪೊಪ್ಪಿಕೊಂಡಿರುವುದಾಗಿ ಹೇಳಲಾಗಿದೆಯೆಂದು ಪಾಕಿಸ್ತಾನದ ಪ್ರಮುಖ ದೈನಿಕ ಒಂದು ವರದಿ ಮಾಡಿದೆ. ಆದರೆ ಪಾಕಿಸ್ತಾನಿ ಪ್ರಾಧಿಕಾರವು ಇದನ್ನು ಇನ್ನಷ್ಟೆ ಬಹಿರಂಗ ಪಡಿಸಬೇಕಿದೆ.

ಮುಂಬೈದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನಿ ತನಿಖಾ ತಂಡವು 'ಬಲವಾದ ಪುರಾವೆ'ಯನ್ನು ಪತ್ತೆ ಮಾಡಿದ್ದು, ಭಯೋತ್ಪಾದನಾ ದಾಳಿಯನ್ನು ಅದು ಯೋಜಿಸಿ ಹಣಕಾಸು ನೀಡಿದೆ ಎಂಬುದು ಸಂಶಯಾತೀತ ಎಂದು ಅಲ್ಲಿನ ಡಾನ್ ಪತ್ರಿಕೆ ವರದಿ ಮಾಡಿದೆ.

ಜುಲೈ 11ರಂದು ಪಾಕಿಸ್ತಾನ ತನಿಖೆಗೆ ಸಂಬಂಧಿಸಿದ ನವೀಕೃತ ಮಾಹಿತಿ ಕಡತವನ್ನು ಭಾರತಕ್ಕೆ ನೀಡಲಾಗಿತ್ತು. ಇದರಲ್ಲಿ ಕರಾಚಿ ಮತ್ತು ಕರಾವಳಿ ಪಟ್ಟಣವಾದ ತಟ್ಟಾದಲ್ಲಿ ಪತ್ತೆಯಾಗಿರುವ ವಸ್ತುಗಳು ಈ ಸಂಘಟನೆಗೆ ಉಗ್ರರಿಗೆ ತರಬೇತಿ ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸಿರುವ ಸುಳಿವು ನೀಡಿದೆ ಎಂದು ಹೇಳಲಾಗಿತ್ತು.

ಲಷ್ಕರೆ ಕಾರ್ಯಕರ್ತರು ದಾಳಿಯ ಸಂಚು ರೂಪಿಸಿ, ಇದಕ್ಕೆ ತಕ್ಕ ಯೋಜನೆ ನಡೆಸಿ, ದುಷ್ಕೃತ್ಯಕ್ಕೆ ನೆರವು, ಹಣಕಾಸು ಒದಗಿಸಿ, ಮುಂಬೈಯಲ್ಲಿ ದಾಳಿ ನಡೆಸಲು ಸಂಹವನ ಜಾಲವನ್ನು ಸ್ಥಾಪಿಸಿದ್ದರು ಎಂಬುದು ಸಂಶಯಾತೀತ ಎಂಬುದಾಗಿ ತನಿಖೆಯು ಸ್ಪಷ್ಟಪಡಿಸಿದೆ ಎಂಬುದಾಗಿ ಮಾಹಿತಿ ಕಡತ ಹೇಳಿತ್ತು.

ದಾಳಿಯ ಹಿಂದಿನ ರೂವಾರಿಯಾಗಿರುವ ಲಕ್ವಿ, ಜರಾರ್ ಶಾ ಮತ್ತು ಇತರ ಮೂವರು ಲಷ್ಕರೆ ಕಾರ್ಯಕರ್ತರಾದ ಹಮ್ಮದ್ ಅಮೀನ್ ಸಾದಿಕ್, ಮಜಹರ್ ಇಕ್ಬಾಲ್ ಅಲಿಯಾಸ್ ಅಲ್ ಕಾಮ ಮತ್ತು ಶಾಹಿದ್ ಜಮೀಲ್ ರೀಯಾದ್ ಇವರುಗಳ ಮೇಲೆ ಪಾಕಿಸ್ತಾವು ಈಗಾಗಲೇ ಆರೋಪ ಹೊರಿಸಿದೆ. ಅಲ್ಲದೆ ಇವರು ದಾಳಿ ನಡೆಸಿರುವುದಕ್ಕೆ ಸಾಕಷ್ಟು ಪುರಾವೆಗಳಿರುವುದಾಗಿ ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

Share this Story:

Follow Webdunia kannada