ಮಧ್ಯಪ್ರದೇಶದ ಖಾರ್ಗೋನ್ನಲ್ಲಿ ಈದ್-ಉಲ್-ಫ್ರಿತ್ ಮತ್ತು ಅಕ್ಷಯ ತೃತೀಯ ಆಚರಣೆ ಸಂದರ್ಭದಲ್ಲಿ 24 ಗಂಟೆಗಳ ಕರ್ಫ್ಯೂ ವಿಧಿಸಲಾಗಿದೆ.
ಕಳೆದ ಏಪ್ರಿಲ್ 10 ರಂದು ರಾಮನವಮಿ ಮೆರವಣಿಗೆಯಲ್ಲಿ ಇದೇ ಪ್ರದೇಶದಲ್ಲಿ ಹಿಂಸಾಚಾರ ವರದಿಯಾಗಿತ್ತು. ಹಾಗಾಗಿ ಖಾರ್ಗೋವ್ನಲ್ಲಿ ಮುಂಬರುವ ರಂಜಾನ್, ಅಕ್ಷಯ ತೃತೀಯ ಹಬ್ಬಗಳನ್ನು ಮನೆಗಳಲ್ಲೇ ಆಚರಿಸುವಂತೆ ಮೇ 2, 3ರಂದು ಕರ್ಫ್ಯೂ ವಿಧಿಸಲಾಗಿದೆ.
ಇದಕ್ಕಾಗಿ ಇಂದು ಬೆಳಗ್ಗೆ 8 ರಿಂದ ಸಂಜೆ 5ರ ವರೆಗೆ ಕರ್ಫ್ಯೂ ಸಡಿಲಿಸಿ ಅಗತ್ಯ ವಸ್ತುಗಳ ಖರೀದಿಗೆ ಆದ್ಯತೆ ನೀಡಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸುಮರ್ ಸಿಂಗ್ ಮುಜಲ್ದಾ ಆದೇಶಿಸಿದ್ದಾರೆ.
ಮಹಾರಾಷ್ಟ್ರದಲ್ಲಿನ 5 ಮಸೀದಿಗಳಿಗೂ ಡಿಜೆ ಸಾಂಗ್ಗಳು ಸದ್ದು ಮಾಡದಂತೆ ಸರ್ಕಾರ ಸೂಚನೆ ನೀಡಿದೆ. ಕೆಲ ಹಿರಿಯ ಮುಸ್ಲಿಂ ಮುಖಂಡರು ಡಿಜೆ ಹಾಕಲು ನಿರ್ಧರಿಸಿದ್ದ ಕಾರಣದಿಂದಾಗಿ ಈ ಆದೇಶ ಹೊರಡಿಸಿದ್ದು,
ಡಿಜೆಗೆ ವಿನಿಯೋಗಿಸುವ ಹಣವನ್ನು ಬಡವರಿಗೆ, ಅವಶ್ಯಕತೆ ಉಳ್ಳವರಿಗೆ ನೀಡುವಂತೆ ಸರ್ಕಾರ ಸಲಹೆ ನೀಡಿದೆ. ಹಾಗೆಯೇ ಜಮ್ಮು ಮತ್ತು ಕಾಶ್ಮೀರದ ಜಾಮಿಯಾ ಮಸೀದಿಯಲ್ಲಿ ಬೆಳಿಗ್ಗೆ 7 ಗಂಟೆಗೆಲ್ಲಾ ಈದ್ ನಮಾಜ್ ಮುಕ್ತಾಯಗೊಳಿಸುವಂತೆ ಸೂಚನೆ ನೀಡಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.