Select Your Language

Notifications

webdunia
webdunia
webdunia
webdunia

23 ವರ್ಷ ವಯಸ್ಸಿನ ಶಾಲಾ ಶಿಕ್ಷಕಿಯನ್ನು ಅಪಹರಿಸಿ ಅತ್ಯಾಚಾರ

23 ವರ್ಷ ವಯಸ್ಸಿನ ಶಾಲಾ ಶಿಕ್ಷಕಿಯನ್ನು ಅಪಹರಿಸಿ ಅತ್ಯಾಚಾರ
ಬರೇಲಿ , ಶನಿವಾರ, 24 ಜನವರಿ 2015 (15:54 IST)
ಶಾಲೆಯಿಂದ ಮನೆಗೆ ಮರಳುತ್ತಿರುವ ಶಿಕ್ಷಕಿಯ ಮೇಲೆ ಯುವಕನೊಬ್ಬಅತ್ಯಾಚಾರವೆಸಗಿದ ಘಟನೆ ಫಿಲಿಬಿಟ್ ಜಿಲ್ಲೆಯ ಖೇರಾ ಗ್ರಾಮದಲ್ಲಿ ನಡೆದಿದೆ.
 
ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಪರಾರಿಯಾದ ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಿಸಿ, ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಅಕ್ಬರಾಬಾದ್ ನಿವಾಸಿಯಾಗಿರುವ ಶಿಕ್ಷಕಿ ಶಾಲೆಯಿಂದ ಮನೆಗೆ ಮರಳುತ್ತಿರುವ ಸಂದರ್ಭದಲ್ಲಿ ಆಕೆಯನ್ನು ಅಡ್ಡಗಟ್ಟಿದ ಆರೋಪಿ ಮಿಂಟು, ಆಕೆಯನ್ನು ಒತ್ತಾಯಪೂರ್ವಕವಾಗಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಘಟನೆಯಿಂದ ನೊಂದ ಶಾಲ ಶಿಕ್ಷಕಿ ಪೊಲೀಸ್ ಠಾಣೆಗೆ ತೆರಳಿ ಆರೋಪಿ ಮಿಂಟು ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದಾಳೆ 

Share this Story:

Follow Webdunia kannada