Select Your Language

Notifications

webdunia
webdunia
webdunia
webdunia

ಚಲಿಸುವ ಕಾರಿನಲ್ಲಿ ಗ್ಯಾಂಗ್ ರೇಪ್

ಚಲಿಸುವ ಕಾರಿನಲ್ಲಿ ಗ್ಯಾಂಗ್ ರೇಪ್
ನವದೆಹಲಿ , ಗುರುವಾರ, 18 ಸೆಪ್ಟಂಬರ್ 2014 (09:26 IST)
23 ವರ್ಷದ ಯುವತಿಯೊಬ್ಬಳನ್ನು ಆಕೆಯ  ಸ್ನೇಹಿತ ಮತ್ತು ಆತನ ಇಬ್ಬರು ಸ್ನೇಹಿತರು ಸೇರಿ  ಚಲಿಸುವ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ  ದಕ್ಷಿಣ ದೆಹಲಿಯಲ್ಲಿ ವರದಿಯಾಗಿದೆ.

ಈ ಭೀಕರ ಕುಕೃತ್ಯವನ್ನು  ನಡೆಸಿದ ನಂತರ ಆಕೆಯನ್ನವರು ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದಾರೆ. 
 
ದೆಹಲಿ ಪೋಲಿಸ್ ಇಲಾಖೆಯಲ್ಲಿ ಮಹಿಳಾ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯ ಮಗಳಾಗಿರುವ ಪೀಡಿತೆಗೆ ಮತ್ತೇರಿಸುವ ಪದಾರ್ಥಗಳನ್ನು ಬೆರೆಸಿದ ತಂಪು ಪಾನೀಯಗಳನ್ನು ಕುಡಿಸಿ ಈ ಕೃತ್ಯ ಎಸಗಲಾಗಿದೆ ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ. 
 
ತನ್ನ ಸ್ನೇಹಿತ ಮತ್ತು ಆತನ ಗೆಳೆಯರೊಂದಿಗೆ ಯುವತಿ ಕಾರ್‌ನಲ್ಲಿ ಸುತ್ತಾಡಲು ಹೋಗಿದ್ದಳು. ದಾರಿ ಮಧ್ಯ ಆರೋಪಿಗಳು ಆಕೆಗೆ ತಂಪು ಪಾನೀಯಗಳನ್ನು ನೀಡಿದರು. ಅದನ್ನು ಕುಡಿದ ಯುವತಿ ತಕ್ಷಣ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಆಗ 3 ಜನ ಯುವಕರು ಆಕೆಯ ಮೇಲೆ ಕೀಚಕತನವನ್ನು ಪ್ರದರ್ಶಿಸಿದ್ದಾರೆ ಎಂದು ಹಿರಿಯ ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
 
ರಸ್ತೆ ಮಧ್ಯೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಯುವತಿಯನ್ನು ಕಂಡ ಆಟೋ ಚಾಲಕನೊಬ್ಬ ಪೋಲಿಸರಿಗೆ ಮಾಹಿತಿ ನೀಡಿದ್ದಾನೆ. ತಕ್ಷಣ ಸ್ಥಳಕ್ಕಾಗಮಿಸಿದ ಪೋಲಿಸರು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. 
 
ನೊಂದ ಯುವತಿ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಇಬ್ಬರನ್ನು ಬಂಧಿಸಿದ್ದಾರೆ.

Share this Story:

Follow Webdunia kannada