Select Your Language

Notifications

webdunia
webdunia
webdunia
webdunia

ಮುಂಬೈ: ಟ್ಯಾಕ್ಸಿ ಚಾಲನೆಗೆ ಪರವಾನಿಗೆ ಕೋರಿ 221 ಮಹಿಳಾ ಅರ್ಜಿ

ಮುಂಬೈ: ಟ್ಯಾಕ್ಸಿ ಚಾಲನೆಗೆ ಪರವಾನಿಗೆ ಕೋರಿ 221 ಮಹಿಳಾ ಅರ್ಜಿ
ಮುಂಬೈ , ಮಂಗಳವಾರ, 23 ಸೆಪ್ಟಂಬರ್ 2014 (14:06 IST)
ದೇಶದ ವಾಣಿಜ್ಯ ರಾಜಧಾನಿಯ ಸಾರಿಗೆ ಇಲಾಖೆ ಮೊದಲ ಬಾರಿಗೆ, ಹಳದಿ ಮತ್ತು  ಕಪ್ಪು ಟ್ಯಾಕ್ಸಿಗಳನ್ನು ಓಡಿಸಲು ಮಹಿಳೆಯರಿಗೆ ಬಾಗಿಲು ತೆರೆದಿದೆ. ಈ ಅವಕಾಶಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದ್ದು 221 ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. 

ಅಲ್ಲದೇ ಮೂವರು ಮಂಗಳಮುಖಿಯರಿಂದ ಕೂಡ ಅರ್ಜಿ ಬಂದಿದ್ದು, ಟ್ಯಾಕ್ಸಿ ಪರವಾನಗೆ ಕೋರಿ ದಕ್ಷಿಣ ಮುಂಬೈನಿಂದ ಎರಡು ಜನ ಮತ್ತು ಉಪನಗರದಿಂದ ಒಬ್ಬರು ಅರ್ಜಿ ಸಲ್ಲಿಸಿದ್ದಾರೆ. 
 
ಈ ಕುರಿತು ಪ್ರತಿಕ್ರಿಯಿಸಿರುವ ಆರ್.ಟಿ.ಓ. ಅಧಿಕಾರಿ ಈ ಹಿಂದೆ ನಾವು ತೃತೀಯ ಲಿಂಗದ ಟ್ಯಾಕ್ಸಿ ಚಾಲಕರನ್ನು ಹೊಂದಿರಲಿಲ್ಲ. ಬಹುಶಃ ಇಂತಹ ಅವಕಾಶವನ್ನು ಅವರಿಗೆ ನೀಡಲಾಗುತ್ತಿರುವುದು ಇದೇ ಮೊದಲು ಎನ್ನುತ್ತಾರೆ. 
 
ಅಂಕಿಅಂಶಗಳ ಪ್ರಕಾರ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಲ್ಲಿ, 1,062 ಪದವೀಧರರು ಮತ್ತು 20 ಜನರು ಸ್ನಾತಕೋತ್ತರ ಪದವೀಧರರು. ಅಭ್ಯರ್ಥಿಗಳಲ್ಲಿ ಕೆಲವರು ಆಟೋ ಚಾಲಕರಾಗಿದ್ದು ಈ ವರ್ಷದಿಂದ ಅವರು ಟ್ಯಾಕ್ಸಿ ಚಾಲನಾ ಪರವಾನಿಗೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರಾಗಿದ್ದಾರೆ. 

Share this Story:

Follow Webdunia kannada