Select Your Language

Notifications

webdunia
webdunia
webdunia
webdunia

ಬುರ್ಖಾಧಾರಿಗಳಿಂದ 21 ವರ್ಷದ ಯುವತಿಯ ಮೇಲೆ ಬರ್ಬರ ರೇಪ್

ಬುರ್ಖಾಧಾರಿಗಳಿಂದ 21 ವರ್ಷದ ಯುವತಿಯ ಮೇಲೆ ಬರ್ಬರ ರೇಪ್
ಬೆಂಗಳೂರು , ಬುಧವಾರ, 4 ಮಾರ್ಚ್ 2015 (16:37 IST)
ಬುರ್ಖಾ ಧರಿಸಿದ ಇಬ್ಬರು ವ್ಯಕ್ತಿಗಳು 21 ವರ್ಷದ ಯುವತಿಯ ಮೇಲೆ ಬರ್ಬರವಾಗಿ ಅತ್ಯಾಚಾರ ನಡೆಸಿದ ಘಟನೆ ಉದ್ಯಾನ ನಗರಿಯಲ್ಲಿ ನಡೆದಿದೆ.
 
ಲಾಲ್‌ಬಾಗ್‌ ಬಳಿಯಿರುವ ಮನೆಯೊಂದಕ್ಕೆ ನುಗ್ಗಿದ ಇಬ್ಬರು ಬುರ್ಖಾಧಾರಿಗಳು ಯುವತಿಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದಾರೆ. ಪೊಲೀಸರು ಅತ್ಯಾಚಾರಕ್ಕೆ ಒಳಗಾದ ಯುವತಿಯ ಹೇಳಿಕೆ ಆಧಾರದ ಮೇಲೆ ಆರೋಪಿ ಪತ್ತೆಗೆ ತೊಡಗುತ್ತಾರೆ. ಆದರೆ, ಪ್ರಕರಣದಲ್ಲಿ ಆರೋಪಿಗಳು ಬುರ್ಖಾ ಧರಿಸಿದ್ದರಿಂದ ಯಾವುದೇ ಪ್ರಬಲ ಸಾಕ್ಷಿಗಳ ಕೊರತೆ ಪೊಲೀಸರನ್ನು ಕಾಡುತ್ತಿದೆ.  
 
ಪೊಲೀಸ್ ಮೂಲಗಳ ಪ್ರಕಾರ, ಮನೆಯಲ್ಲಿ ಯುವತಿ ಎಕಾಂಗಿಯಾಗಿದ್ದಳು. ಮನೆಯ ಮುಂಭಾಗದ ಬಾಗಿಲು ಹಾಕಲಾಗಿತ್ತು. ಆದರೆ, ಹಿಂಬಾಗದ ಬಾಗಿಲು ತೆರೆದಿತ್ತು. ಹಿಂಬಾಗಿಲಿನಿಂದ ಮನೆಯೊಳಗೆ ಪ್ರವೇಶಿಸಿದ ಆರೋಪಿಗಳು ಟಿವಿ ನೋಡುತ್ತಾ ಕುಳಿತಿದ್ದ ಯುವತಿಯನ್ನು ಹಿಂಬದಿಯಿಂದ ದಾಳಿ ಮಾಡಿ, ಆಕೆಯ ಮುಖಕ್ಕೆ ಬಟ್ಟೆಯಿಂದ ಒತ್ತಿಹಿಡಿದು ಬೆಡ್‌ರೂಮ್‌ಗೆ ಎಳೆದುಕೊಂಡು ಹೋಗಿದ್ದಾರೆ. ಆಕೆಯನ್ನು ಮಂಚಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿದ ನಂತರ ರೇಪ್ ಎಸಗಿದ್ದಾರೆ ಎನ್ನಲಾಗಿದೆ 
 
ಯುವತಿಯ ಮೇಲೆ ಅತ್ಯಾಚಾರವೆಸಗಿದ ನಂತರ ಆರೋಪಿಗಳು ಪರಾರಿಯಾಗಿದ್ದಾರೆ. ನಂತರ ಮನೆಗೆ ಬಂದ ಸಹೋದರ ಸಹೋದರಿಯ ಸ್ಥಿತಿ ಕಂಡು ಆಘಾತಗೊಂಡಿದ್ದಾನೆ. ಕೂಡಲೇ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಾರೆ.
 
ಯುವತಿಯ ಹೇಳಿಕೆಯನ್ನು ಪಡೆದ ಪೊಲೀಸರು ಆರೋಪಿಗಳ ಪತ್ತೆಗೆ ಜಾಲಬೀಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 

Share this Story:

Follow Webdunia kannada