Webdunia - Bharat's app for daily news and videos

Install App

ಫೇಸ್‌ಬುಕ್‌ನಲ್ಲಿ ನಕಲಿ ನಗ್ನ ಫೋಟೋ: ಯುವತಿ ಆತ್ಮಹತ್ಯೆ

Webdunia
ಮಂಗಳವಾರ, 28 ಜೂನ್ 2016 (15:00 IST)
ತನ್ನ ಫೋಟೋವನ್ನು ತಿರುಚಿ ಆಶ್ಲೀಲವಾಗಿ ರೂಪಿಸಿ ಫೇಸ್‌ಬುಕ್‌ನಲ್ಲಿ ಅಪ್ಲೋಡ್ ಮಾಡಿರುವುದಕ್ಕೆ ನೊಂದು ಸರ್ಕಾರಿ ನೌಕರರೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ.

ಸೇಲಂ ಜಿಲ್ಲೆಯ ಎಲಂ ಪಿಳ್ಳೈ ಮೂಲದ ಎ. ವಿನುಪ್ರಿಯ  ಬಿಎಸ್‌ಸಿ ಮುಗಿಸಿ ಸರಕಾರಿ ನೌಕರಿಯಲ್ಲಿದ್ದಳು. ಯುವತಿ ತಂದೆ ಅಣ್ಣಾ ದೊರೈ ಬಡ ನೇಕಾರರಾಗಿದ್ದಾರೆ.
 
ತನ್ನ ಫೋಟೋವನ್ನು ತಿರುಚಿ ಫೇಸ್‌‌ಬುಕ್‌ನಲ್ಲಿ ಕೆಟ್ಟದಾಗಿ ಅಪ್ಲೋಡ್ ಮಾಡಲಾಗಿದೆ. ಇದು ನನ್ನ ಪೋಷಕರು ಕೂಡ ನನ್ನ ಮೇಲೆ ಅನುಮಾನ ಪಡುವಂತೆ ಮಾಡಿದೆ. ಪೊಲೀಸರು ಸಹ ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ವಿನುಪ್ರಿಯಾ ಡೆತ್ ನೋಟ್ ಬರೆದಿಟ್ಟಿದ್ದಾಳೆ ಎಂದು ಮರಣಪತ್ರದಲ್ಲಿ ಬರೆದಿಟ್ಟಿದ್ದಾಳೆ ಎಂದು ಡಿಎಸ್‌ಪಿ ಕಂದಸಾಮಿ ಹೇಳಿದ್ದಾರೆ.
 
ಫೇಸ್‌ಬುಕ್‌ನಲ್ಲಿ ತನ್ನ ಮಗಳ ಆಕ್ಷೇಪಾರ್ಹ ಫೋಟೋಗಳನ್ನು ಪ್ರಕಟಿಸಿದ್ದುದರ ಬಗ್ಗೆ ಪ್ರಿಯ ತಂದೆ ಅಣ್ಣಾ ದೊರೈ ಜೂನ್‌ 23 ರಂದು ಪೋಲಿಸರಿಗೆ ದೂರು ಸಲ್ಲಿಸಿದ್ದರು. ಆದರೆ ಭಾನುವಾರ ರಾತ್ರಿ ಮತ್ತೆ ಆಕೆಯ ಅರೆನಗ್ನ ಫೋಟೋಗಳನ್ನು ಪ್ರಕಟಿಸಲಾಯಿತು. ಜತೆಗೆ ಆಕೆಯ ತಂದೆಯ ಮೊಬೈಲ್‌ಗೆ ಕೂಡ ಕಳುಹಿಸಲಾಯಿತು. ಇದರಿಂದ ನೊಂದ ಪ್ರಿಯಾ ಸೋಮವಾರ ಮಧ್ಯಾಹ್ನ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
 
ನಾನು ದೂರು ನೀಡಿದಾಗಲೇ ಪೊಲೀಸರು ಸೂಕ್ತ ಕ್ರಮಗಳನ್ನು ಕೈಗೊಂಡಿದ್ದರೆ ನನ್ನ ಮಗಳು ಬದುಕಿರುತ್ತಿದ್ದಳು ಎಂದು ಅಣ್ಣಾದೊರೈ ಆರೋಪಿಸುತ್ತಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Viral Video: ಅಹ್ಮದಾಬಾದ್ ನಲ್ಲಿ ರಥಯಾತ್ರೆ ವೇಳೆ ಯದ್ವಾ ತದ್ವಾ ಓಡಿದ ಆನೆ

Arecanut price today: ಅಡಿಕೆ ಬೆಲೆ ಯಥಾಸ್ಥಿತಿ, ಕೊಬ್ಬರಿಗೆ ಬಂಪರ್

Gold Price: ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ

ವಿಲ್ ಬರೆಯುವುದು ಹೇಗೆ, ಯಾಕಾಗಿ ಬರೆಯಬೇಕು ಇಲ್ಲಿದೆ ವಿವರ

ಈ ವಿಡಿಯೋ ನೋಡ್ತಿದ್ದ ಹಾಗೇ ನೀವು ಸಡನ್ ಶಾಕ್ ಆಗೋದು ಗ್ಯಾರಂಟಿ

ಮುಂದಿನ ಸುದ್ದಿ