Select Your Language

Notifications

webdunia
webdunia
webdunia
webdunia

2011-12: ಯಾವುದು ಅಗ್ಗವಾಯಿತು? ಯಾವುದು ದುಬಾರಿಯಾಯಿತು?

2011-12: ಯಾವುದು ಅಗ್ಗವಾಯಿತು? ಯಾವುದು ದುಬಾರಿಯಾಯಿತು?
ನವದೆಹಲಿ , ಶುಕ್ರವಾರ, 16 ಮಾರ್ಚ್ 2012 (09:30 IST)
ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಸೋಮವಾರ ಸಂಸತ್ತಿನಲ್ಲಿ ಮಂಡಿಸಿದ 2011-12 ಸಾಲಿನ ಆಯವ್ಯಯ ಪತ್ರದಲ್ಲಿ ಮೊಬೈಲ್, ಕಬ್ಬಿಣ, ಪ್ರಿಂಟರ್, ಎಲ್‌ಸಿಡಿ-ಎಲ್ಇಡಿ ಟಿವಿ, ಸಾಬೂನು ಮುಂತಾದವುಗಳ ಬೆಲೆ ಇಳಿಕೆಯಾಗಿದ್ದರೆ, ಬ್ರಾಂಡೆಡ್ ಆಭರಣಗಳು, ಸಿದ್ಧ ಉಡುಪುಗಳು ದುಬಾರಿಯಾಗಿವೆ.

ಯಾವುದರ ಬೆಲೆ ಏರಲಿದೆ, ಯಾವುದರ ಬೆಲೆ ಇಳಿಕೆಯಾಗಲಿದೆ ಎಂಬುದರ ಸ್ಥೂಲ ನೋಟ ಇಲ್ಲಿದೆ:

ಬಜೆಟ್ ಪ್ರಸ್ತಾವನೆ ಪ್ರಕಾರ, ಬೆಲೆ ಇಳಿಕೆಯಾಗುವ ಭರವಸೆ ಮೂಡಿಸಿದವು:
ಮೂಲ ಆಹಾರ, ತೈಲ
ಅಮೂಲ್ಯ ಹರಳುಗಳು
ಚಿನ್ನ, ಬೆಳ್ಳಿ ಆಭರಣ
ನೂಲು
ಕಬ್ಬಿಣ, ಉಕ್ಕು
ಕೃಷಿ ಯಂತ್ರೋಪಕರಣಗಳು
ಡೈಪರ್ಸ್
ಮೊಬೈಲ್
ರೆಫ್ರಿಜರೇಟರ್
ಎಲ್‌ಇಡಿ ಉಪಕರಣಗಳು, ಎಲ್‌ಸಿಡಿ ಟಿವಿ
ಗೃಹೋಪಯೋಗಿ ವಸ್ತುಗಳು
ಹೋಮಿಯೋಪಥಿ ಔಷಧಿಗಳು
15 ಲಕ್ಷದೊಳಗಿನ ಗೃಹ ಸಾಲ
ಪ್ರಿಂಟರ್
ವಿದ್ಯುತ್ (ಬ್ಯಾಟರಿ) ಚಾಲಿತ ವಾಹನಗಳು
ಸಿಮೆಂಟ್
ಸೌರ ಉಪಕರಣಗಳು
ಕಚ್ಚಾ ರೇಷ್ಮೆ
ಆಮದು ಮಾಡಿಕೊಂಡ ಫಿಲ್ಮ್ ರೋಲ್
ಸಾಬೂನು
ಶೈತ್ಯಾಗಾರಕ್ಕಾಗಿ ಏರ್ ಕಂಡಿಷನರ್‌ಗಳು
ಇಂಧನ ಪರಿವರ್ತನೆ ಕಿಟ್‌ಗಳು

ಬಜೆಟ್ ಪ್ರಸ್ತಾವನೆ ಪ್ರಕಾರ, ಬೆಲೆ ಏರುವ ನಿರೀಕ್ಷೆಯಲ್ಲಿರುವವು:
ರೆಡಿಮೇಡ್ ಬಟ್ಟೆ ದುಬಾರಿ
ಬ್ರಾಂಡೆಡ್ ಚಿನ್ನಾಭರಣ
ಮದ್ಯ ಪೂರೈಸುವ ಎಸಿ ರೆಸ್ಟಾರೆಂಟ್‌ಗಳು ಇನ್ನು ದುಬಾರಿ
ಸೆಂಟ್ರಲೆ ಎಸಿ ಹಾಗೂ 25ಕ್ಕಿಂತ ಹೆಚ್ಚು ಬೆಡ್‌ಗಳಿರುವ ಆಸ್ಪತ್ರೆಗಳಿಗೆ ಸೇವಾ ತೆರಿಗೆಯಿಂದಾಗಿ ದುಬಾರಿ
ದೇಶೀ ವಿಮಾನಯಾನಕ್ಕೆ 50 ರೂ., ಅಂತಾರಾಷ್ಟ್ರೀಯ ಇಕಾನಮಿ ದರ್ಜೆ ಪ್ರಯಾಣಕ್ಕೆ 250 ರೂ.

Share this Story:

Follow Webdunia kannada