Webdunia - Bharat's app for daily news and videos

Install App

2002ರ ಹಿಟ್ ಆಂಡ್ ರನ್ ಕೇಸ್: ನಾನೇ ಕಾರು ಚಲಾಯಿಸುತ್ತಿದೆ ಎಂದ ಸಲ್ಮಾನ್ ಕಾರು ಚಾಲಕ ಅಶೋಕ್ ಸಿಂಗ್

Webdunia
ಸೋಮವಾರ, 30 ಮಾರ್ಚ್ 2015 (15:24 IST)
2002ರಲ್ಲಿ ನಡೆದ ಹಿಟ್ ಆಂಡ್ ರನ್ ಕೇಸ್‌ ಪ್ರಕರಣದ ಆರೋಪಿ ಸಲ್ಮಾನ್ ಖಾನ್ ಕಾರು ಚಾಲಕ ಅಶೋಕ್ ಸಿಂಗ್ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದು, ಕಾರನ್ನು ನಾನೇ ಚಲಾಯಿಸುತ್ತಿದ್ದೆ. ಟೈರ್ ಬರ್ಸ್ಟ್ ಆಗಿದ್ದರಿಂದ ನಿಯಂತ್ರಣ ಕಳೆದುಕೊಂಡಿದ್ದರಿಂದ ಅಪಘಾತವಾಗಿದೆ ಎಂದು ತಿಳಿಸಿದ್ದಾನೆ. ಇದರಿಂದಾಗಿ ಸಲ್ಮಾನ್ ನಿರಾಳರಾದಂತಾಗಿದೆ.

ಕಳೆದ ಕೆಲ ದಿನಗಳ ಹಿಂದೆ, 49 ವರ್ಷ ವಯಸ್ಸಿನ ಬಾಲಿವುಡ್ ನಟ ಸಲ್ಮಾನ್ ಖಾನ್ ನ್ಯಾಯಾಲಯದ ಮುಂದೆ ಹಾಜರಾಗಿ, ನನ್ನ ವಿರುದ್ಧ ಸುಳ್ಳು ಹೇಳಿಕೆ ದಾಖಲಿಸಲಾಗಿದೆ. ಅಪಘಾತವಾದ ದಿನದಂದು ನಾನು ಮದ್ಯ ಸೇವಿಸಿಯೂ ಇರಲಿಲ್ಲ. ಕಾರನ್ನು ನಾನು ಚಲಾಯಿಸುತ್ತಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಅಂದು ರಾತ್ರಿ ಕಾರು ಅಪಘಾತವಾದ ನಂತರ ನನ್ನ ಕಾರು ಚಾಲಕ ಅಶೋಕ್ ಸಿಂಗ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಬಯಸಿದ್ದರು. ಆದರೆ, ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ ಎಂದು ತಿಳಿಸಿದ್ದಾರೆ.

2002ರ ಸೆಪ್ಟೆಂಬರ್ 28 ರಂದು ರಾತ್ರಿ ಸಲ್ಮಾನ್ ಮಾಲೀಕತ್ವದ ಟೋಯೋಟಾ ಲಾಂಡ್ ಕ್ರೂಸರ್ ಕಾರು ನಿಯಂತ್ರಣ ಕಳೆದುಕೊಂಡು ಅಮೆರಿಕನ್ ಎಕ್ಸ್‌ಪ್ರೆಸ್ ಬೇಕರಿಗೆ ನುಗ್ಗಿತ್ತು. ಬೇಕರಿ ಮುಂದೆ ಮಲಗಿದ್ದವರಲ್ಲಿ ಒಬ್ಬನು ಸಾವನ್ನಪ್ಪಿದ್ದು, ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು.    

ಮಾರನೇ ದಿನ ಬಾಂದ್ರಾ ಠಾಣೆಯ ಪೊಲೀಸರು ಬಾಲಿವುಡ್ ಸಲ್ಮಾನ್ ಖಾನ್‌ನನ್ನು ಬಂಧಿಸಿ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments