Select Your Language

Notifications

webdunia
webdunia
webdunia
webdunia

2002ರ ದಂಗೆಯ ಬಗ್ಗೆ ದುಃಖವಿದೆ, ಆದರೆ ಅಪರಾಧಿ ಪ್ರಜ್ಞೆ ಇಲ್ಲ: ಮೋದಿ

2002ರ ದಂಗೆಯ ಬಗ್ಗೆ ದುಃಖವಿದೆ, ಆದರೆ ಅಪರಾಧಿ ಪ್ರಜ್ಞೆ ಇಲ್ಲ: ಮೋದಿ
ದೆಹಲಿ , ಬುಧವಾರ, 26 ಮಾರ್ಚ್ 2014 (15:48 IST)
ಬ್ರಿಟನ್ ಲೇಖಕನಿಂದ ಬರೆಯಲ್ಪಟ್ಟಿರುವ ಮೋದಿ ಕುರಿತ ಪುಸ್ತಕದ ಪ್ರಕಾರ "ಗುಜರಾತ್ ದಂಗೆಯ ಕುರಿತು ಮಾತನಾಡಿರುವ ಮೋದಿ 2002 ರ ಗಲಭೆಯ ಬಗ್ಗೆ ನನಗೆ ದುಃಖವಿದೆ.ಆದರೆ ಆ ಬಗ್ಗೆ ನನಗೆ ಅಪರಾಧ ಭಾವನೆ ಇಲ್ಲ. ಗುಜರಾತ್ ದಂಗೆಯ ನಂತರ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಬಯಸಿದ್ದೆ. ಆದರೆ ನನ್ನ ಪಕ್ಷದವರು ನನ್ನನ್ನು ತಡೆದರು" ಎಂದು ಹೇಳಿದ್ದಾರೆ.
PTI

ಬ್ರಿಟಿಷ್ ಲೇಖಕ ಮತ್ತು ಟಿವಿ ನಿರ್ಮಾಪಕ ಆಂಡಿ ಮೋರಿನ್ ಬರೆದಿರುವ 'ನರೇಂದ್ರ ಮೋದಿ-ರಾಜಕೀಯ ಜೀವನ ಚರಿತ್ರೆ' ಯಲ್ಲಿ ಇದು ವ್ಯಕ್ತವಾಗಿದೆ. "ದಂಗೆಯ ನಂತರ 12 ವರ್ಷದವರೆಗೆ ನಾನು ಸಾರ್ವಜನಿಕ ಟೀಕೆಗೆ ಗುರಿಯಾಗುತ್ತಾ ಬಂದಿದ್ದೇನೆ. ಆದರೆ ಮಾಧ್ಯಮದವರಿಗೆ ಅವರ ಕೆಲಸ ಮಾಡಲು ಬಿಟ್ಟು ಬಿಡಲು ನಿರ್ಧರಿಸಿದೆ.ಯಾವುದೇ ಸಂಘರ್ಷದ ಜತೆ ನನ್ನ ಸಮಯವನ್ನು ಹಾಳು ಮಾಡಲು ನಾನು ತಯಾರಿರಲಿಲ್ಲ" ಎಂದು ಮೋದಿ ಈ ಪುಸ್ತಕದ ಮೂಲಕ ಹೇಳಿದ್ದಾರೆ .

"ಅವರ ಪ್ರಚಾರ ಮೆರವಣಿಗೆಗಳಲ್ಲಿ, ಹೆಲಿಕಾಪ್ಟರ್‌ನಲ್ಲಿ ಜೊತೆಗೂಡಿ ಪಯಣಿಸಿ ಮತ್ತು ಅನೇಕ ವಾರಗಳಲ್ಲಿ ಅವರನ್ನು ಸಂದರ್ಶನ ನಡೆಸಿ ಮೋದಿ ಕುರಿತ ವಿವರವಾದ ಪುಸ್ತಕ "ನರೇಂದ್ರ ಮೋದಿ ರಾಜಕೀಯ ಜೀವನಚರಿತ್ರೆ " ಬರೆದಿದ್ದೇನೆ. ಹಾರ್ಪರ್ ಕಾಲಿನ್ಸ್ ಇದನ್ನು ಪ್ರಕಟಿಸಿದ್ದಾರೆ" ಎಂದು ಆಂಡಿ ಮೋರಿನ್ ಹೇಳಿದ್ದಾರೆ.

310 ಪುಟಗಳ ಪುಸ್ತಕ ಗಲಭೆಯ ಕುರಿತು ವಿವರವಾದ ಹೇಳುತ್ತಿದ್ದು ಇಲ್ಲಿಯವರೆಗೆ ಅಪ್ರಕಟಿತ, ದೃಢೀಕರಿಸಬಹುದಾದ ದಾಖಲೆಯನ್ನು ನೀಡುತ್ತದೆ.

ಫೆಬ್ರವರಿ 27, 2002 ರ ದಿನ ಅಯೋಧ್ಯಾದಿಂದ ಬಹುತೇಕವಾಗಿ 'ಕರಸೇವಕರನ್ನು ಒಯ್ಯುತ್ತಿದ್ದ ರೈಲಿನ ಮೇಲೆ ದಾಳಿಯ ನಡೆಸಿ 59 ಜನರನ್ನು ಜೀವಂತವಾಗಿ ಸುಟ್ಟ ನಂತರ ನಡೆದ ಗಲಭೆಯನ್ನು ತಾನು ಹೇಗೆ ನಿಭಾಯಿಸಿದೆ ಎಂಬುದನ್ನು ಮೋದಿ ಇದರಲ್ಲಿ ವಿವರಿಸಿದ್ದಾರೆ.
webdunia
PTI

" ಆ ದಿನ ರಾತ್ರಿ ಗೋಧ್ರಾದಿಂದ ಗಾಂಧಿನಗರಕ್ಕೆ ತಡರಾತ್ರಿ ಹಿಂತಿರುಗಿದ ನಂತರ ನಾನು ಸೇನೆಯನ್ನು ದಂಗೆ ನಡೆಯುತ್ತಿದ್ದ ಸ್ಥಳಕ್ಕೆ ಕಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದೆ. ಆದರೆ ಆ ಸಮಯದಲ್ಲಿ ಸಂಸತ್ತಿನ ಮೇಲೆ ದಾಳಿ ಕಾರಣಕ್ಕೆ ಸೇನೆ ಭಾರತ- ಪಾಕ್ ಗಡಿಯಲ್ಲಿ ಆತಂಕದ ವಾತಾವರಣವಿದೆ ಎಂದು ಅಧಿಕಾರಿಗಳು ತಿಳಿಸಿದರು" ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೆ ಮೋದಿ ಮೂರು ನೆರೆಯ ರಾಜ್ಯಗಳಾದ ರಾಜಸ್ಥಾನ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಕ್ಕೆ ಕಾನೂನು ಜಾರಿ ಮತ್ತು ಪ್ಯಾರಾ ಮಿಲಿಟರಿ ಸಿಬ್ಬಂದಿ ರೂಪದಲ್ಲಿ ನೆರವು ಕೇಳಿ, ಪ್ರತಿ ರಾಜ್ಯದಿಂದ ಸಶಸ್ತ್ರ ಪೊಲೀಸ್‍ರ 10 ತುಕಡಿಗಳನ್ನು ಕಳುಹಿಸುವಂತೆ ಕೇಳಿಕೊಂಡರು. ಪ್ರತಿಯಾಗಿ ಮಹಾರಾಷ್ಟ್ರ ಕಡಿಮೆ ಸಂಖ್ಯೆಯ ಸಹಾಯಕ ಸಿಬ್ಬಂದಿಯನ್ನು ಕಳಿಸಿದರೆ, ಇತರ ಎರಡು ರಾಜ್ಯಗಳು ಮನವಿಯನ್ನು ನಿರಾಕರಿಸಿದವು ಎಂದು ಪುಸ್ತಕ ಹೇಳುತ್ತದೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada