Webdunia - Bharat's app for daily news and videos

Install App

10 ವರ್ಷದ ಬಾಲಕಿ ಸೇರಿದಂತೆ ಇಬ್ಬರ ಮೇಲೆ ಅತ್ಯಾಚಾರ: ಕೆರಳಿದ ಬಿಹಾರ್

Webdunia
ಗುರುವಾರ, 23 ಜೂನ್ 2016 (16:24 IST)
ಬಿಹಾರದಲ್ಲಿ 10 ವರ್ಷದ ಮಗು ಸೇರಿದಂತೆ ಇಬ್ಬರ ಮೇಲೆ ಅತ್ಯಾಚಾರ ನಡೆದಿದ್ದು, ಸಂಪೂರ್ಣ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. 
 
ಪಾಟ್ಣಾದಿಂದ 160 ಕೀಲೋಮೀಟರ್ ದೂರದಲ್ಲಿರುವ ಹಳ್ಳಿಯೊಂದರಲ್ಲಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆಕೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯ ಆಕೆ ಅಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಐರೋಪಿಗಳಾದ ಪ್ರಮೋದ್ ಸಹ್ನಿ ಮತ್ತು ಕಮಲ್ ಸಹ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.
 
ಬಾಲಕಿಯನ್ನು ಅಪಹಣ ಮಾಡಿ ಅತ್ಯಾಚಾರವೆಸಗಲಾಗಿದೆ. ಆಕೆ ಕಿರುಚಿಕೊಳ್ಳಲು ಪ್ರಯತ್ನಿಸಿದಾಗ ಕುತ್ತಿಗೆಗೆ ಚಾಕುವನ್ನು ಹಿಡಿದು ಹೆದರಿಸಿದ್ದಾರೆ ಎಂದು ಪೀಡಿತಳ ಸಹೋದರ ಮಾಹಿತಿ ನೀಡಿದ್ದಾನೆ. 
 
ಪ್ರಕರಣವನ್ನು ಕೈ ಬಿಡುವಂತೆ ನಮಗೆ ಬೆದರಿಕೆ ಹಾಕಲಾಗಿದೆ. ನಾವು ಬಡವರು, ಅವರ ಒತ್ತಾಯಕ್ಕೆ ಒಪ್ಪದಿದ್ದರೆ ನಮ್ಮನ್ನು ಶೂಟ್ ಮಾಡಲಾಗುವುದು ಎಂದಾತ ಆತಂಕವನ್ನು ವ್ಯಕ್ತ ಪಡಿಸಿದ್ದಾನೆ. 
 
ಅಷ್ಟೇ ಅಲ್ಲದೆ ಮೋತಿಹಾರ್‌ನ ಇನ್ನೊಂದು ಪ್ರದೇಶದಲ್ಲಿ 17 ವರ್ಷದ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯವಾದ ಘಟನೆ ವರದಿಯಾಗಿದೆ. ಗನ್ ಹಿಡಿದು ಆಕೆಯ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಪೋಷಕರು ದೂರಿದ್ದಾರೆ. ಆದರೆ ಆಕೆಯ ಮೇಲೆ ಅತ್ಯಾಚಾರವಾಗಿಲ್ಲ ಎಂದು ಪೊಲೀಸರು ವಾದಿಸುತ್ತಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜಕೀಯ ನಿವೃತ್ತಿ ಬಳಿಕ ಅಮಿತ್ ಶಾ ಏನು ಮಾಡ್ತಾರೆ: ಪ್ಲ್ಯಾನ್ ರಿವೀಲ್

ರಕ್ಷಣಾ ಸಚಿವ ರಾಜನಾಥ್ ಸಿಂಗ್‌ರನ್ನು ಭೇಟಿಯಾದ ಸಿದ್ದರಾಮಯ್ಯ, ಮೈಸೂರು ದಸರಾದ ಬಗ್ಗೆ ಮುಖ್ಯ ಚರ್ಚೆ

70 ಗಂಟೆ ಕೆಲಸ ಮಾಡಲು ರೆಡಿಯಾ: ನಾರಾಯಣ ಮೂರ್ತಿ ಹೇಳಿಕೆಯಿಂದ ಟ್ರೋಲ್‌ಗೊಳಗಾದ ರಿಷಿ ಸುನಕ್‌

ನಾನು ಪಕ್ಷಾಂತರ ಮಾಡಲ್ಲ, ನನ್ನದು ತಟಸ್ಥ ನಿಲುವು: ಜಿಟಿ ದೇವೇಗೌಡ

ದೇಶಕ್ಕೆ ಮೋದಿ, ರಾಜ್ಯಕ್ಕೆ ಕುಮಾರಸ್ವಾಮಿ ಸಿಎಂ ಆಗ್ಬೇಕು: ನಿಖಿಲ್ ಕುಮಾರಸ್ವಾಮಿ

ಮುಂದಿನ ಸುದ್ದಿ