Webdunia - Bharat's app for daily news and videos

Install App

2 ತಿಂಗಳ ಮಗುವಿಗೆ ಲಿವರ್ ಕಸಿ: ಜಗತ್ತಿನಲ್ಲಿ ಮೊದಲ ಯಶಸ್ವಿ ಚಿಕಿತ್ಸೆ

Webdunia
ಗುರುವಾರ, 20 ಅಕ್ಟೋಬರ್ 2016 (18:01 IST)
ರೋಚಕ.. ಆತಂಕ.. ಮುಂದೇನಾಗುತ್ತೆ ಅಂತಾ ಆ ಪೋಷಕರು ಜೀವ ಕೈಯಲ್ಲಿ ಹಿಡಿದು ತಮ್ಮ ಎರಡು ತಿಂಗಳ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ರು. ಮಗುವಿನ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಅದರಲ್ಲೂ ಆ ದಂಪತಿಗೆ ಅದು ಚೊಚ್ಚಲ ಮಗು. ಹೀಗಿರುವಾಗ ಬೇರೆ ದೇಶದವರಾದರು, ಭಾರತಕ್ಕೆ ಬಂದು ಮಗುವಿಗೆ ಚಿಕಿತ್ಸೆ ಕೊಡಿಸಲು ಮುಂದಾಗಿದ್ದರು. ಇಷ್ಟು ಕಷ್ಟದ ಮಧ್ಯೆ ಕೊನೆಗೆ ಅಲ್ಲೊಂದು ಮಿರಾಕಲ್ ನಡೆದಿತ್ತು.  ಆ ಮಿರಾಕಲ್ ವಿಶ್ವದಲ್ಲೇ ಮೊದಲಾಗಿತ್ತು.
ಹೌದು ಪೋರ್ಚುಗಲ್ ಲೋಗೋಸ್‌ನಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದ ದಂಪತಿಯ ಮಗುವಿಗೆ ಲಿವರ್ ತೊಂದರೆ ಕಾಣಿಸಿದ್ರಿಂದ ಮಗು ತೀವ್ರ ಅನಾರೋಗ್ಯದಿಂದ ಬಳಲುತ್ತಿತ್ತು. ಹೋಗಿರುವಾಗ ಹೆಚ್ಚಿನ ಚಿಕಿತ್ಸೆಗೆಂದು ದಂಪತಿ ಮಗುವನ್ನು ಆಗಸ್ಟ್ 2 ರಂದು ಗುರ್ಗಾಂವ್‌ನ ಮೆದಾಂತಾದ ಮೆಡಿಸಿಟಿ ಆಸ್ಪತ್ರೆಗೆ ದಾಖಲಿಸಿದ್ರು. 
 
ಕೂಡಲೇ ಮಗುವಿನ ಬಗ್ಗೆ ವಿಶೇಷ ಕಾಳಜಿ ತೋರಿದ 50 ಮಂದಿ ತಜ್ಞರುಳ್ಳ ವೈದ್ಯಸಿಬ್ಬಂದಿ ನಾನಾ ಬಗೆಯ ಚಿಕಿತ್ಸೆಗಳನ್ನು ನೀಡಿದರು. ಜೊತೆಗೆ ಮಗುವಿನ ರಕ್ತಕ್ಕೂ ಬದಲಿ ಲೀವರ್ ಅಳವಡಿಸಬೇಕಾದ ವ್ಯಕ್ತಿಯ ರಕ್ತವನ್ನು ಪರೀಕ್ಷೆ ನಡೆಸಲಾಯಿತು. ಕೊನೆಗೆ ಕಳೆದ 45 ದಿನಗಳಿಂದ ಮಗುವಿಗೆ ಚಿಕಿತ್ಸೆ ನೀಡಿ ಇದೀಗ ಮಗುವಿಗೆ ಬದಲಿ ಲಿವರ್ ಅಳವಡಿಸಲಾಗಿದೆ. ಚಿಕಿತ್ಸೆಗಾಗಿ ಬರೋಬ್ಬರಿ 21 ಲಕ್ಷ ವ್ಯಯಿಸಲಾಗಿದೆ. 
 
ಚಿಕಿತ್ಸೆಗೂ ಮುನ್ನ 2.1 ಕೆಜಿ ಇದ್ದ ಮಗು ಇದೀಗ 2.59 ತೂಕವಿದೆ. ಮಗುವಿಗೆ ಉಸಿರಾಟ ಹಾಗೂ ಆಹಾರ ಸೇವನೆ ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮಗುವನ್ನು ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು 9 ವಾರಗಳ ಕಾಲ ಮಗುವಿಗೆ ಚಿಕಿತ್ಸೆ ನೀಡಲಾಗುತ್ತದೆ. ಆಗ ಮಗುವಿನ ತೂಕ 3 ಕೆಜೆ ಆಗಲಿದೆ. ಅದಲ್ಲದೇ ಮಗುವಿನ ಲಿವರ್ ಯಥಾ ಪ್ರಕಾರ ಕಾರ್ಯನಿರ್ವಹಿಸಲಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments