Webdunia - Bharat's app for daily news and videos

Install App

ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಕ್ಯಾಬ್ ಚಾಲಕ, ಭದ್ರತಾ ಸಿಬ್ಬಂದಿ ಅರೆಸ್ಟ್

Webdunia
ಮಂಗಳವಾರ, 25 ಅಕ್ಟೋಬರ್ 2016 (14:54 IST)
ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ  ಕ್ಯಾಬ್ ಚಾಲಕ ಮತ್ತು ಓರ್ವ ಭದ್ರತಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
 
ಪೊಲೀಸ್ ಮೂಲಗಳ ಪ್ರಕಾರ, ಅಕ್ಟೋಬರ್ 22 ರಂದು ಮಧ್ಯ ರಾತ್ರಿ ಮಹಿಳಾ ಉದ್ಯೋಗಿ, ಅಲ್ವಾಲ್ ಪ್ರದೇಶದಲ್ಲಿರುವ ಮನೆಗೆ ತೆರಳಲು ಕಂಪೆನಿಯ ಕಾರು ಹತ್ತಿದ್ದಾಳೆ. ಕಾರಿನಲ್ಲಿ ಒಬ್ಬಳೆ ಇರುವುದು ಕಂಡ ಕಂಪೆನಿಯ ಭದ್ರತಾ ಸಿಬ್ಬಂದಿಯೊಬ್ಬ ತಾನು ಡ್ರಾಪ್ ನೀಡುವುದಾಗಿ ಹೇಳಿ ಕಾರು ಏರಿದ್ದಾನೆ.
 
ಭದ್ರತಾ ಸಿಬ್ಬಂದಿ ಕಾರಿನ ಮುಂದಿನ ಸೀಟಿನಲ್ಲಿ ಕೂರುವುದು ಬಿಟ್ಟು ಯುವತಿ ಕುಳಿತಿದ್ದ ಹಿಂದಿನ ಸೀಟಿನಲ್ಲಿಯೇ ಕುಳಿತಿದ್ದಾನೆ. ಕಾರು ಸಾಗುತ್ತಿದ್ದಂತೆ, ಯುವತಿಗೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ. ಯುವತಿ ಕಾರು ನಿಲ್ಲಿಸುವಂತೆ ಚಾಲಕನಿಗೆ ಗೋಗೆರೆದರೂ ಯಾವುದೇ ಪ್ರಯೋಜನವಾಗಿಲ್ಲ.
 
ನಂತರ ಯುವತಿ ಜೋರಾಗಿ ಕೂಗಿಕೊಂಡಾಗ ಗಾಬರಿಗೊಂಡು ಚಾಲಕ ಯುವತಿಯ ಮನೆಯ ಬಳಿ ಕಾರು ನಿಲ್ಲಿಸಿದ್ದಾನೆ.
 
ಮಾರನೇ ದಿನ ಯುವತಿ ಅಲ್ವಾಲ್ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದಾಳೆ. ಯುವತಿಯ ದೂರಿನ ಮೇರೆಗೆ ಕಾರು ಚಾಲಕ ಮತ್ತು ಭದ್ರತಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟ್ರಾಫಿಕ್‌ ಜಾಮ್‌ಗೆ ಸುಸ್ತು: ಖಾಸಗಿ ಮೇಲ್ಸೇತುವೆ ನಿರ್ಮಿಸಲು ಮುಂದಾದ ಪ್ರೆಸ್ಟೀಜ್ ಗ್ರೂಪ್‌

ದ.ಕನ್ನಡದಲ್ಲಿ ಹೆಚ್ಚುತ್ತಿರುವ ಮಲೇರಿಯಾ ಪ್ರಕರಣ: ವಲಸೆ ಕಾರ್ಮಿಕರ ಮೇಲೆ ಹೆಚ್ಚಿನ ನಿಗಾ

ಪಹಲ್ಗಾಮ್‌ ದಾಳಿ, ಪಾಕ್‌ ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರಿಗೆ ಬಿಗ್‌ ಶಾಕ್‌

ಸಿದ್ದರಾಮಯ್ಯ ಮಾಸ್ ಲೀಡರ್, ಅವರು ಇಲ್ಲೇ ಇರಬೇಕಾದವರಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

Viral Video, ಉಜ್ಜಯಿನಿ ಮುಹರಂ ಮೆರವಣಿಗೆ ವೇಳೆ ತಳ್ಳಾಟ, ಇಬ್ಬರು ಪೊಲೀಸರಿಗೆ ಗಾಯ

ಮುಂದಿನ ಸುದ್ದಿ