Webdunia - Bharat's app for daily news and videos

Install App

2ಜಿ ಹಗರಣ; ಸಿಬಿಐಯಿಂದ ಕನಿಮೋಳಿ, ಕರುಣಾನಿಧಿ ಪತ್ನಿ ವಿಚಾರಣೆ

Webdunia
ಶುಕ್ರವಾರ, 11 ಮಾರ್ಚ್ 2011 (17:52 IST)
2 ಜಿ ತರಂಗಾಂತರ ಹಗರಣ ತನಿಖೆಯಲ್ಲಿ ಸಿಬಿಐ ತನ್ನ ಕುಣಿಕೆಯನ್ನು ದಿನೇದಿನೇ ಬಿಗಿಗೊಳಿಸುತ್ತಿದೆ. ಡಿಎಂಕೆ ಸಂಸದೆ - ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಪುತ್ರಿ ಕನಿಮೋಳಿ ಹಾಗೂ ಕರುಣಾನಿಧಿ ಪತ್ನಿ ದಯಾಳು ಅಮ್ಮಾಳ್ ಅವರನ್ನು ಸಿಬಿಐ ಶುಕ್ರವಾರ ವಿಚಾರಣೆಗೊಳಪಡಿಸಿದೆ.

ಚೆನ್ನೈಯಲ್ಲಿನ ಡಿಎಂಕೆ ಪ್ರಧಾನ ಕಚೇರಿಗೆ ಇಂದು ಬೆಳಗ್ಗೆ ಆಗಮಿಸಿದ ಸಿಬಿಐ ತಂಡವು, ಕರುಣಾನಿಧಿ ಮಾಲೀಕತ್ವದ ಕಲೈಂಞರ್ ಟಿವಿ ಚಾನೆಲ್‌ನಲ್ಲಿನ ದಯಾಳು ಅಮ್ಮಾಳ್ ಪಾಲು ಮತ್ತು 2ಜಿ ತರಂಗಾಂತರ ಹಂಚಿಕೆಯಲ್ಲಿನ ಆರೋಪಗಳ ಕುರಿತು ಹಲವರನ್ನು ವಿಚಾರಣೆಗೊಳಪಡಿಸಿತು. ಡಿಎಂಕೆ ಕಚೇರಿಯ ಕಟ್ಟಡದಲ್ಲೇ ಇರುವ ಅವರ ಟಿವಿ ಚಾನೆಲ್‌ನ ಆಡಳಿತ ನಿರ್ದೇಶಕ ಶರದ್ ಕುಮಾರ್ ಅವರನ್ನು ಕೂಡ ಪ್ರಶ್ನಿಸಲಾಗಿದೆ.

ದೂರಸಂಪರ್ಕ ಖಾತೆಯ ಮಾಜಿ ಸಚಿವ ಎ. ರಾಜಾ ಅವರಿಂದ ಅಕ್ರಮವಾಗಿ ತರಂಗಾಂತರಗಳನ್ನು ಪಡೆದುಕೊಂಡಿರುವ ಕಂಪನಿಯ ಮಾಲೀಕ ಶಾಹಿದ್ ಬಲ್ವಾ ಅವರಿಂದ 214 ಕೋಟಿ ರೂಪಾಯಿಗಳನ್ನು ಟಿವಿ ಚಾನೆಲ್ ಕಲೈಂಞರ್ ಸ್ವೀಕರಿಸಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕನಿಮೋಳಿ, ದಯಾಳು ಅಮ್ಮಾಳ್ ಮತ್ತು ಶರತ್ ಕುಮಾರ್ ಅವರನ್ನು ವಿಚಾರಣೆಗೊಳಪಡಿಸಲಾಯಿತು.

ಈ ಟಿವಿ ಚಾನೆಲ್‌ನಲ್ಲಿ ದಯಾಳು ಅಮ್ಮಾಳ್ ಮತ್ತು ಕನಿಮೋಳಿ ಶೇ.80ರ ಶೇರನ್ನು ಹೊಂದಿದ್ದಾರೆ.

ಆದಾಯ ತೆರಿಗೆ ಇಲಾಖೆಯು ದೂರವಾಣಿ ಕದ್ದಾಲಿಕೆ ಮಾಡಿದ್ದ ಸಂದರ್ಭದಲ್ಲಿ ಬಹಿರಂಗವಾಗಿದ್ದ ಕಾರ್ಪೊರೇಟ್ ಲಾಬಿಗಾರ್ತಿ ನೀರಾ ರಾಡಿಯಾ ಮತ್ತು ಕನಿಮೋಳಿ ನಡುವಿನ ಸಂಬಂಧದ ಕುರಿತು ಕನಿಮೋಳಿಯಲ್ಲಿ ಪ್ರಶ್ನಿಸಲಾಗಿದೆ. ಸಂಭಾಷಣೆಯಲ್ಲಿ ಬಹಿರಂಗವಾಗಿದ್ದ ಅಂಶಗಳನ್ನು ಪ್ರಶ್ನಾವಳಿಗೆ ಸೇರಿಸಲಾಗಿದೆ ಎಂದು ಸಿಬಿಐ ಮೂಲಗಳು ಹೇಳಿವೆ.

2009 ರಲ್ಲಿ ಕಲೈಂಞರ್ ಟಿವಿಗೆ ಸಿನಿಯುಗ್ ಫಿಲ್ಮ್ಸ್ ಸಂಸ್ಥೆಯಿಂದ 214 ಕೋಟಿ ರೂಪಾಯಿ ಸಂದಾಯವಾಗಿತ್ತು. ಸಿನಿಯುಗ್ ಸಂಸ್ಥೆಗೆ ಈ ಹಣವನ್ನು ಒದಗಿಸಿದ್ದು ಶಾಹಿದ್ ಬಲ್ವಾ ಅವರ ಸಂಬಂಧಿಕರು ನಿರ್ದೇಶಕರು ಮತ್ತು ಶೇರುದಾರರಾಗಿರುವ ಡಿಬಿ ಗ್ರೂಪ್ ಸಂಸ್ಥೆ ಎಂದು ಸಿಬಿಐ ಇತ್ತೀಚೆಗಷ್ಟೇ ನ್ಯಾಯಾಲಯವೊಂದಕ್ಕೆ ವಿವರಣೆ ನೀಡಿತ್ತು.

ಈಗಾಗಲೇ ಮಾಜಿ ಸಚಿವ, ಕರುಣಾನಿಧಿ ಆಪ್ತ ರಾಜಾ ಅವರನ್ನು ಬಂಧಿಸಿರುವ ಸಿಬಿಐ, ಅವರಿಂದ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿದೆ. ಈಗ ಕರುಣಾನಿಧಿ ಪುತ್ರಿ ಮತ್ತು ಪತ್ನಿಯನ್ನು ವಿಚಾರಣೆಗೊಳಪಡಿಸಿದೆ. ಇದರಿಂದ 2ಜಿ ಹಗರಣ ಕುರಿತ ಇನ್ನಷ್ಟು ಅಂಶಗಳು ಬಹಿರಂಗವಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಲ್ವಡಿ ಕೃಷ್ಣರಾಜ ಒಡೆಯರ್ ನಾಡಿಗೆ ನೀಡಿದ ಕೊಡುಗೆಗಳ ಪಟ್ಟಿ ಇಲ್ಲಿದೆ ನೋಡಿ

ನಾಲ್ವಡಿ ಒಡೆಯರ್ ಗಿಂತ ನೀವು ಗ್ರೇಟ್ ಅಂತೆ ಎಂದು ಕೇಳಿದ್ದಕ್ಕೆ ಸಿದ್ದರಾಮಯ್ಯ ಉತ್ತರ ನೋಡಿ

ಸಿದ್ದರಾಮಯ್ಯ ಒಡೆಯರ್ ಗಿಂತ ಗ್ರೇಟ್ ಎಂದಿದ್ದ ಯತೀಂದ್ರ: ಯದುವೀರ್ ಒಡೆಯರ್ ಉತ್ತರ ನೋಡಿ

ರಸಗೊಬ್ಬರ ರೈತರಿಗೆ ಸಿಗಲು ಸರ್ಕಾರ ವ್ಯವಸ್ಥೆಯೇ ಮಾಡಿಲ್ಲ: ಬಿವೈ ವಿಜಯೇಂದ್ರ

Arecanut price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Show comments